ನ್ಯೂಯಾರ್ಕ್: ‘ನನಗೆ ಹಾಸಿಗೆಯಲ್ಲಿ ಸುಖವೇ ಸಿಗುತ್ತಿಲ್ಲ. ದಿನಾ ಬರೀ ಯಾಂತ್ರಿಕವಾಗಿ ಕೆಲಸ ಮುಗಿಸೋದಷ್ಟೇ. ಜೀವನವೇ ಬೇಸರ ಬಂದುಬಿಟ್ಟಿದೆ’ ಎಂದು ಕೊರಗುತ್ತಿರುವ ಪುರುಷ ಸಿಂಹಗಳಿಗೆ ಇಲ್ಲಿದೆ ಒಂದು ಸುಲಭ ಉಪಾಯ. ಹಾಸಿಗೆ ಸುಖ ಹೆಚ್ಚಿಸಿಕೊಳ್ಳಬೇಕೇ? ಹಾಗಾದ್ರೆ ಅಡುಗೆ, ಮನೆಗೆಲಸ ಮಾಡಿ! ಇದೇನೂ ಢೋಂಗಿ ವೈದ್ಯರ ಜಾಹೀರಾತಲ್ಲ. ಕ್ಯಾಲಿಫೋರ್ನಿಯಾ ವಿವಿ ಸಂಶೋಧಕರ ಹೊಸ ಸಂಶೋಧನೆ. ಪತ್ನಿಗೆ ಅಡುಗೆ ಕೆಲಸ, ಮನೆಗೆಲಸದಲ್ಲಿ ಸಹಕರಿಸುವ ಗಂಡನಿಗೆ ಲೈಂಗಿಕ ಕ್ರಿಯೆಯಲ್ಲೂ ಹೆಚ್ಚಿನ ಸುಖ ಸಿಗುತ್ತದೆ ಎಂದು ಈ ಸಂಶೋಧಕರು ಹೇಳುತ್ತಾರೆ. ಸರಿ, ಅಡುಗೆ ಮಾಡೋದಕ್ಕೂ ಹಾಸಿಗೆ ಸುಖಕ್ಕೂ ಏನಪ್ಪಾ ಸಂಬಂಧ? ಸಂಬಂಧ ಇದೆ ಕಣ್ರೀ. ಮನೆಯಲ್ಲಿ ಹೆಂಡತಿಯ ಜತೆ ಕೆಲಸದಲ್ಲಿ ಗಂಡನೂ ಸೇರಿಕೊಂಡರೆ ಆಕೆಗೆ ಖುಷಿ ಹೆಚ್ಚಾಗುತ್ತೆ, ತೃಪ್ತಿ ಸಿಗುತ್ತೆ. ಮಿಲನ ಮಹೋತ್ಸವದಲ್ಲೂ ಅವಳು ಅದೇ ಖುಷಿಯಲ್ಲಿ ಪಾಲ್ಗೊಳ್ಳುತ್ತಾಳೆ. ಇದರಿಂದ ದಾಂಪತ್ಯವೂ ಸುಲಲಿತವಾಗಿ ಸಾಗುತ್ತದೆ ಎಂದು ಸಂಶೋಧಕರು ಗುಟ್ಟು ಬಿಟ್ಟುಕೊಟ್ಟಿದ್ದಾರೆ. ಗಂಡ ಮನೆಗೆಲಸ ಮಾಡಿದ್ರೆ ನಮಗೂ ಸೆಕ್ಸ್‌ನಲ್ಲಿ ಆಸಕ್ತಿ ಹೆಚ್ಚಾಗುತ್ತದೆ ಎಂದು ಪತ್ನಿಯರು ಸಂಶೋಧಕರ ಮುಂದೆ ಉಲಿದಿದ್ದಾರೆ. ಅಂದಹಾಗೆ, ಮನೆಗೆಲಸ ಮಾಡ್ಬೇಕಾಗಿದ್ದಲ್ವೇ ಅಂತ ಹೇಳಿ ಚಾವಡಿಯಲ್ಲಿ ಮಗುವಿನ ಜತೆ ಆಟ ಆಡ್ತಾ ಕೂತರೆ ಪತಿ-ಪತ್ನಿ ಸಂಬಂಧ ಸುಧಾರಿಸೋದಿಲ್ಲ ಎಂದು ಎಚ್ಚರಿಸುತ್ತಾರೆ ಮನೋವೈದ್ಯರು.
Thursday, March 13, 2008
Subscribe to:
Post Comments (Atom)
1 comment:
ಇದು ವಾಸ್ತವ..ಅಲ್ಲದೇ ರಸಿಕರಾದ್ ನಾವು ಅಡುಗೆ, ತಿಂಡಿ, ಜ್ಯೂಸ್, ಪಾಯಸ, ಎಲ್ಲವನ್ನೂ ನಮ್ಮ ಅದ್ಭುತ ಸಂವೇದನಾ ಶೀಲ ದೇಹದ ಅಂಗಗಳಿಗೆ ಸ್ಪರ್ಷ ಮಾಡಿಸಿ ಹರಡಿ ನೆಕ್ಕಿ ತಿಂದು ಡೈನಿಂಗ್ ಟೇಬಲನ್ನೇ ಬೆಡ್ ರೂಮಾಗಿ ಪರಿವರ್ತಿಸಬಹುದು...
ಇಂತಾ ಕತೆಗಳಿಗೆ ಭೇಟಿ ಕೊಡಿ
shrungara.blogspot.com
Post a Comment