Thursday, March 13, 2008

ಚರ್ಚ್‌ನ ‘ಕಾಮ-ಸೂತ್ರ’ ಬೋಧೆ!

ರತಿಕ್ರೀಡೆ ಒಂದು ಪವಿತ್ರ ಕಾರ್ಯ. ದಂಪತಿಗಳು ಸೆಕ್ಸ್ ಬಗ್ಗೆ ಮುಕ್ತವಾಗಿ ಮಾತಾಡಬೇಕು. ಸೆಕ್ಸ್‌ನಲ್ಲಿ ಪರಸ್ಪರ ಏನು ಬೇಕು, ಏನು ಬೇಡ ಎನ್ನುವುದರ ಬಗ್ಗೆ ಪತಿ-ಪತ್ನಿ ಚರ್ಚಿಸಬೇಕು- ಇದು ಯಾವುದೋ ಲೈಂಗಿಕ ತಜ್ಞ ತನ್ನೆದುರು ಕೂತ ದಂಪತಿಗಳಿಗೆ ನೀಡಿದ ಉಪದೇಶ ಅಲ್ಲ. ಲಂಡನ್‌ನ ಚರ್ಚ್ ಒಂದರ ‘ಕಾಮ-ಸೂತ್ರ’ ಬೋಧೆ! ಧಾರ್ಮಿಕ ಕೇಂದ್ರಗಳೆಂದರೆ ಅಲ್ಲಿ ಬರೀ ಧರ್ಮ ಬೋಧೆ, ಮತ ಪ್ರಚಾರ ಅಷ್ಟೇ ಇರುತ್ತೆ. ಆದರೆ ಲಂಡನ್‌ನ ಚರ್ಚ್‌ವೊಂದಕ್ಕೆ ಹೋದರೆ ಅಲ್ಲಿ ದಂಪತಿಗಳಿಗೆ ಮುಕ್ತವಾಗಿ ದಾಂಪತ್ಯ ದೀಪಿಕೆಯ ದರ್ಶನ ಮಾಡಲಾಗುತ್ತದೆ. ‘ಗ್ರೋವಿಂಗ್ ಟುಗೆದರ್’ ಎಂಬ ಹೆಸರಿನ ೧೨೦ ಪುಟಗಳ ಪುಸ್ತಕವೊಂದನ್ನು ಈ ಚರ್ಚ್ ಮುದ್ರಿಸಿದ್ದು ಅದರಲ್ಲಿ ವೈವಾಹಿಕ ಜೀವನ ಹೇಗಿರಬೇಕು, ಸೆಕ್ಸ್‌ನ್ನು ಹೇಗೆ ಅನುಭವಿಸಬೇಕು, ಮಕ್ಕಳು, ಹಣಕಾಸಿನ ನಿರ್ವಹಣೆ ಹೇಗೆ- ಇತ್ಯಾದಿ ವಿವರಣೆಗಳಿವೆಯಂತೆ. ಅದೆಲ್ಲಾ ಸರಿ, ಮತ ಬೋಧನೆ ಮಾಡುತ್ತಿದ್ದ ಚರ್ಚ್ ದಾಂಪತ್ಯದ ಬೋಧನೆಗೆ ಹೊರಟಿದ್ದಾದರೂ ಯಾಕೆ? ಬ್ರಿಟನ್‌ನಲ್ಲೀಗ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿವೆ. ಅಲ್ಲಿನ ಪ್ರತಿ ನಾಲ್ಕು ಮಕ್ಕಳಲ್ಲಿ ಒಂದು ಮಗುವಿಗೆ ತಂದೆ ಅಥವಾ ತಾಯಿ ಯಾರಾದರೊಬ್ಬರ ಮುಖ ಕಾಣುವ ಭಾಗ್ಯವೇ ಇಲ್ಲ. ವಿಚ್ಛೇದನ ಪ್ರಕರಣ ತಡೆಯೋದಿಕ್ಕೆ ಚರ್ಚ್ ಹೊರಟಿದೆ.

2 comments:

Unknown said...

ಹೆಂಡತಿಯೊಂದಿಗೆ ರತಿ ಕ್ರೀಡೆಯ ಬಗ್ಗೆ ಹಾಗೂ ಹೇಗೆ ಸುಖಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿ.

Kaamaputra - ಕಾಮಪುತ್ರ said...

ಸುಮಧುರವಾಗಿದೆ..
ನಾನು ಬ್ಲಾಗ್ ಲೋಕಕ್ಕೆ ಹೊಸಬ..
ನನ್ನ ಬ್ಲಾಗ್ ನೋಡಿ : http://kaamaputra.blogspot.com/
ನಿಮ್ಮ ಸ್ನೇಹಿತರಿಗೂ ನನ್ನ ಬ್ಲಾಗ್ ನೋಡಲು ಹೇಳಿ ಪ್ಲೀಸ್...!