Thursday, March 13, 2008

ಇಷ್ಟು ದೊಡ್ಡ ‘ಎದೆ’ ಇಟ್ಕೊಂಡು ಅಷ್ಟು ಚಿಕ್ಕ ಜಾಗದಲ್ಲಿ ತೂರೋಕೆ ಸಾಧ್ಯವೇ?

ಟೋಕಿಯೋ: ಹೆಣ್ಮಕ್ಕಳಿಗೆ ತಮ್ಮ ‘ಎದೆ’ ದೊಡ್ಡದಿದ್ದರೂ ಕಿರಿಕಿರಿ, ಸಣ್ಣದಿದ್ದರೂ ತಲೆನೋವು. ಜಪಾನ್‌ನ ಮಾಡೆಲ್ ಸೆರೆನಾ ಕೊಜಾಕುರಾಗೆ ಕೂಡಾ ತನ್ನ ದೈತ್ಯ ಸ್ತನದ ಬಗ್ಗೆ ಕೀಳರಿಮೆ ಇತ್ತು. ಆದರೆ ಇದೇ ‘ಎದೆ’ ಆಕೆಗೆ ಕೋರ್ಟಲ್ಲಿ ಕೇಸು ಗೆಲ್ಲಿಸಿಕೊಟ್ಟಿದೆ! ತಾನು ಬೇರೊಬ್ಬಳ ಜತೆ ಇದ್ದಾಗ ಈ ೩೮ರ ಹರೆಯದ ಮಾಡೆಲ್ ಮನೆ ಬಾಗಿಲಿಗೆ ತೂತು ಕೊರೆದು ಅದರ ಮೂಲಕ ಅತಿಕ್ರಮಣ ಮಾಡಿದ್ದಳು ಎಂದು ವ್ಯಕ್ತಿಯೊಬ್ಬ ಕೋರ್ಟಲ್ಲಿ ಕೇಸು ದಾಖಲಿಸಿದ್ದ. ಈಕೆ ಇಷ್ಟು ದೊಡ್ಡ ಎದೆ ಇಟ್ಕೊಂಡು ಅಷ್ಟು ಚಿಕ್ಕ ಜಾಗದಲ್ಲಿ ತೂರೋದು ಸಾಧ್ಯವೇ ಎಂದು ಸೆರೆನಾ ವಕೀಲರು ಕೋರ್ಟಲ್ಲಿ ಪ್ರಶ್ನಿಸಿದ್ದರು. ಬಾಗಿಲಿಗೆ ಕೊರೆದ ರಂಧ್ರದಷ್ಟೇ ಗಾತ್ರದ ರಿಂಗ್‌ನ್ನು ಆಕೆಯ ತಲೆಯಿಂದ ಹಾಕಿ ನ್ಯಾಯಾಧೀಶರಿಗೆ ಮನವರಿಕೆ ಮಾಡಿ ಕೊಡಲಾಯಿತು. ಈ ‘ಸತ್ಯ ದರ್ಶನ’ದಿಂದ ಸಂತುಷ್ಟರಾದ ನ್ಯಾಯಾಧೀಶರು ಸೆರೆನಾ ಪರ ತೀರ್ಪು ನೀಡಿದ್ದರು. ಇಷ್ಟೆಲ್ಲಾ ಆದ ಬಳಿಕ ಟಿವಿ ಚಾನೆಲೊಂದು ಆಕೆಯನ್ನು ಸ್ಟುಡಿಯೋಕ್ಕೆ ಕರೆಸಿ ‘ದೈತ್ಯ’ ಮಾಡೆಲ್ ಬಾಗಿಲ ತೂತಿನಲ್ಲಿ ತೂರೋದು ಅಸಾಧ್ಯ ಎಂಬ ಬಗ್ಗೆ ಪ್ರಾತ್ಯಕ್ಷಿಕೆಯನ್ನೂ ಮಾಡಿತು!

No comments: