Monday, March 17, 2008

ಸಿಕ್ಕಿತು ಜಿ ಸ್ಪಾಟ್!

ಎಲ್ಲಿ ಇರುತ್ತದೆ?
ಮಹಿಳೆಯರ ದೇಹದಲ್ಲಿ.
-ಇಷ್ಟು ದಿನ ಎಲ್ಲಿತ್ತು?
ಅಲ್ಲೇ ಇತ್ತು. ಆದರೆ ಇದೆಯೋ ಇಲ್ಲವೋ ಎಂಬುದರ ಬಗ್ಗೆ ಅನುಮಾನವಿತ್ತು.
-ಯಾರಿಗೆ ಸಿಕ್ಕಿತು?
ಅದನ್ನು ಹುಡುಕುತ್ತಿದ್ದ ವಿಜ್ಞಾನಿಗಳಿಗೆ.
-ಏನು ಪ್ರಯೋಜನ?
ಇದನ್ನು ಹೊಂದಿರುವ ಮಹಿಳೆಯರು ಮಾತ್ರ ಅತ್ಯುನ್ನತ ಲೈಂಗಿಕ ಸುಖ ಅನುಭವಿಸುತ್ತಾರೆ.
-ಎಲ್ಲರಲ್ಲೂ ಇರುತ್ತದೆಯಾ?
ಅದೃಷ್ಟಶಾಲಿಗಳಲ್ಲಿ ಮಾತ್ರ!
-ಅದು ಹೇಗಿರುತ್ತೆ?
ಚಂದ್ರನಾಡಿಗಿಂತ ಸಣ್ಣದಾಗಿ, ಜಿಆಕಾರದಲ್ಲಿ .
-ಸರಿಯಾಗಿ ಎಲ್ಲಿರುತ್ತದೆ?

ಇದು ಅತಿಯಾಯಿತು. ಇಲ್ಲಿ ಬರೆದು ತೋರಿಸೋಕೆ ಅದೇನು ಗುಬ್ಬಿ ಮರೀನಾ? ಬೇಕಾದರೆ ಚಿತ್ರದಲ್ಲಿ ಹುಡುಕಿ.


Thursday, March 13, 2008

ಚರ್ಚ್‌ನ ‘ಕಾಮ-ಸೂತ್ರ’ ಬೋಧೆ!

ರತಿಕ್ರೀಡೆ ಒಂದು ಪವಿತ್ರ ಕಾರ್ಯ. ದಂಪತಿಗಳು ಸೆಕ್ಸ್ ಬಗ್ಗೆ ಮುಕ್ತವಾಗಿ ಮಾತಾಡಬೇಕು. ಸೆಕ್ಸ್‌ನಲ್ಲಿ ಪರಸ್ಪರ ಏನು ಬೇಕು, ಏನು ಬೇಡ ಎನ್ನುವುದರ ಬಗ್ಗೆ ಪತಿ-ಪತ್ನಿ ಚರ್ಚಿಸಬೇಕು- ಇದು ಯಾವುದೋ ಲೈಂಗಿಕ ತಜ್ಞ ತನ್ನೆದುರು ಕೂತ ದಂಪತಿಗಳಿಗೆ ನೀಡಿದ ಉಪದೇಶ ಅಲ್ಲ. ಲಂಡನ್‌ನ ಚರ್ಚ್ ಒಂದರ ‘ಕಾಮ-ಸೂತ್ರ’ ಬೋಧೆ! ಧಾರ್ಮಿಕ ಕೇಂದ್ರಗಳೆಂದರೆ ಅಲ್ಲಿ ಬರೀ ಧರ್ಮ ಬೋಧೆ, ಮತ ಪ್ರಚಾರ ಅಷ್ಟೇ ಇರುತ್ತೆ. ಆದರೆ ಲಂಡನ್‌ನ ಚರ್ಚ್‌ವೊಂದಕ್ಕೆ ಹೋದರೆ ಅಲ್ಲಿ ದಂಪತಿಗಳಿಗೆ ಮುಕ್ತವಾಗಿ ದಾಂಪತ್ಯ ದೀಪಿಕೆಯ ದರ್ಶನ ಮಾಡಲಾಗುತ್ತದೆ. ‘ಗ್ರೋವಿಂಗ್ ಟುಗೆದರ್’ ಎಂಬ ಹೆಸರಿನ ೧೨೦ ಪುಟಗಳ ಪುಸ್ತಕವೊಂದನ್ನು ಈ ಚರ್ಚ್ ಮುದ್ರಿಸಿದ್ದು ಅದರಲ್ಲಿ ವೈವಾಹಿಕ ಜೀವನ ಹೇಗಿರಬೇಕು, ಸೆಕ್ಸ್‌ನ್ನು ಹೇಗೆ ಅನುಭವಿಸಬೇಕು, ಮಕ್ಕಳು, ಹಣಕಾಸಿನ ನಿರ್ವಹಣೆ ಹೇಗೆ- ಇತ್ಯಾದಿ ವಿವರಣೆಗಳಿವೆಯಂತೆ. ಅದೆಲ್ಲಾ ಸರಿ, ಮತ ಬೋಧನೆ ಮಾಡುತ್ತಿದ್ದ ಚರ್ಚ್ ದಾಂಪತ್ಯದ ಬೋಧನೆಗೆ ಹೊರಟಿದ್ದಾದರೂ ಯಾಕೆ? ಬ್ರಿಟನ್‌ನಲ್ಲೀಗ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿವೆ. ಅಲ್ಲಿನ ಪ್ರತಿ ನಾಲ್ಕು ಮಕ್ಕಳಲ್ಲಿ ಒಂದು ಮಗುವಿಗೆ ತಂದೆ ಅಥವಾ ತಾಯಿ ಯಾರಾದರೊಬ್ಬರ ಮುಖ ಕಾಣುವ ಭಾಗ್ಯವೇ ಇಲ್ಲ. ವಿಚ್ಛೇದನ ಪ್ರಕರಣ ತಡೆಯೋದಿಕ್ಕೆ ಚರ್ಚ್ ಹೊರಟಿದೆ.

‘ಹಾಸಿಗೆ ಸುಖ’ ಹೆಚ್ಚಬೇಕೇ- ಅಡುಗೆ ಮಾಡಿ!

ನ್ಯೂಯಾರ್ಕ್: ‘ನನಗೆ ಹಾಸಿಗೆಯಲ್ಲಿ ಸುಖವೇ ಸಿಗುತ್ತಿಲ್ಲ. ದಿನಾ ಬರೀ ಯಾಂತ್ರಿಕವಾಗಿ ಕೆಲಸ ಮುಗಿಸೋದಷ್ಟೇ. ಜೀವನವೇ ಬೇಸರ ಬಂದುಬಿಟ್ಟಿದೆ’ ಎಂದು ಕೊರಗುತ್ತಿರುವ ಪುರುಷ ಸಿಂಹಗಳಿಗೆ ಇಲ್ಲಿದೆ ಒಂದು ಸುಲಭ ಉಪಾಯ. ಹಾಸಿಗೆ ಸುಖ ಹೆಚ್ಚಿಸಿಕೊಳ್ಳಬೇಕೇ? ಹಾಗಾದ್ರೆ ಅಡುಗೆ, ಮನೆಗೆಲಸ ಮಾಡಿ! ಇದೇನೂ ಢೋಂಗಿ ವೈದ್ಯರ ಜಾಹೀರಾತಲ್ಲ. ಕ್ಯಾಲಿಫೋರ್ನಿಯಾ ವಿವಿ ಸಂಶೋಧಕರ ಹೊಸ ಸಂಶೋಧನೆ. ಪತ್ನಿಗೆ ಅಡುಗೆ ಕೆಲಸ, ಮನೆಗೆಲಸದಲ್ಲಿ ಸಹಕರಿಸುವ ಗಂಡನಿಗೆ ಲೈಂಗಿಕ ಕ್ರಿಯೆಯಲ್ಲೂ ಹೆಚ್ಚಿನ ಸುಖ ಸಿಗುತ್ತದೆ ಎಂದು ಈ ಸಂಶೋಧಕರು ಹೇಳುತ್ತಾರೆ. ಸರಿ, ಅಡುಗೆ ಮಾಡೋದಕ್ಕೂ ಹಾಸಿಗೆ ಸುಖಕ್ಕೂ ಏನಪ್ಪಾ ಸಂಬಂಧ? ಸಂಬಂಧ ಇದೆ ಕಣ್ರೀ. ಮನೆಯಲ್ಲಿ ಹೆಂಡತಿಯ ಜತೆ ಕೆಲಸದಲ್ಲಿ ಗಂಡನೂ ಸೇರಿಕೊಂಡರೆ ಆಕೆಗೆ ಖುಷಿ ಹೆಚ್ಚಾಗುತ್ತೆ, ತೃಪ್ತಿ ಸಿಗುತ್ತೆ. ಮಿಲನ ಮಹೋತ್ಸವದಲ್ಲೂ ಅವಳು ಅದೇ ಖುಷಿಯಲ್ಲಿ ಪಾಲ್ಗೊಳ್ಳುತ್ತಾಳೆ. ಇದರಿಂದ ದಾಂಪತ್ಯವೂ ಸುಲಲಿತವಾಗಿ ಸಾಗುತ್ತದೆ ಎಂದು ಸಂಶೋಧಕರು ಗುಟ್ಟು ಬಿಟ್ಟುಕೊಟ್ಟಿದ್ದಾರೆ. ಗಂಡ ಮನೆಗೆಲಸ ಮಾಡಿದ್ರೆ ನಮಗೂ ಸೆಕ್ಸ್‌ನಲ್ಲಿ ಆಸಕ್ತಿ ಹೆಚ್ಚಾಗುತ್ತದೆ ಎಂದು ಪತ್ನಿಯರು ಸಂಶೋಧಕರ ಮುಂದೆ ಉಲಿದಿದ್ದಾರೆ. ಅಂದಹಾಗೆ, ಮನೆಗೆಲಸ ಮಾಡ್ಬೇಕಾಗಿದ್ದಲ್ವೇ ಅಂತ ಹೇಳಿ ಚಾವಡಿಯಲ್ಲಿ ಮಗುವಿನ ಜತೆ ಆಟ ಆಡ್ತಾ ಕೂತರೆ ಪತಿ-ಪತ್ನಿ ಸಂಬಂಧ ಸುಧಾರಿಸೋದಿಲ್ಲ ಎಂದು ಎಚ್ಚರಿಸುತ್ತಾರೆ ಮನೋವೈದ್ಯರು.

ಇಷ್ಟು ದೊಡ್ಡ ‘ಎದೆ’ ಇಟ್ಕೊಂಡು ಅಷ್ಟು ಚಿಕ್ಕ ಜಾಗದಲ್ಲಿ ತೂರೋಕೆ ಸಾಧ್ಯವೇ?

ಟೋಕಿಯೋ: ಹೆಣ್ಮಕ್ಕಳಿಗೆ ತಮ್ಮ ‘ಎದೆ’ ದೊಡ್ಡದಿದ್ದರೂ ಕಿರಿಕಿರಿ, ಸಣ್ಣದಿದ್ದರೂ ತಲೆನೋವು. ಜಪಾನ್‌ನ ಮಾಡೆಲ್ ಸೆರೆನಾ ಕೊಜಾಕುರಾಗೆ ಕೂಡಾ ತನ್ನ ದೈತ್ಯ ಸ್ತನದ ಬಗ್ಗೆ ಕೀಳರಿಮೆ ಇತ್ತು. ಆದರೆ ಇದೇ ‘ಎದೆ’ ಆಕೆಗೆ ಕೋರ್ಟಲ್ಲಿ ಕೇಸು ಗೆಲ್ಲಿಸಿಕೊಟ್ಟಿದೆ! ತಾನು ಬೇರೊಬ್ಬಳ ಜತೆ ಇದ್ದಾಗ ಈ ೩೮ರ ಹರೆಯದ ಮಾಡೆಲ್ ಮನೆ ಬಾಗಿಲಿಗೆ ತೂತು ಕೊರೆದು ಅದರ ಮೂಲಕ ಅತಿಕ್ರಮಣ ಮಾಡಿದ್ದಳು ಎಂದು ವ್ಯಕ್ತಿಯೊಬ್ಬ ಕೋರ್ಟಲ್ಲಿ ಕೇಸು ದಾಖಲಿಸಿದ್ದ. ಈಕೆ ಇಷ್ಟು ದೊಡ್ಡ ಎದೆ ಇಟ್ಕೊಂಡು ಅಷ್ಟು ಚಿಕ್ಕ ಜಾಗದಲ್ಲಿ ತೂರೋದು ಸಾಧ್ಯವೇ ಎಂದು ಸೆರೆನಾ ವಕೀಲರು ಕೋರ್ಟಲ್ಲಿ ಪ್ರಶ್ನಿಸಿದ್ದರು. ಬಾಗಿಲಿಗೆ ಕೊರೆದ ರಂಧ್ರದಷ್ಟೇ ಗಾತ್ರದ ರಿಂಗ್‌ನ್ನು ಆಕೆಯ ತಲೆಯಿಂದ ಹಾಕಿ ನ್ಯಾಯಾಧೀಶರಿಗೆ ಮನವರಿಕೆ ಮಾಡಿ ಕೊಡಲಾಯಿತು. ಈ ‘ಸತ್ಯ ದರ್ಶನ’ದಿಂದ ಸಂತುಷ್ಟರಾದ ನ್ಯಾಯಾಧೀಶರು ಸೆರೆನಾ ಪರ ತೀರ್ಪು ನೀಡಿದ್ದರು. ಇಷ್ಟೆಲ್ಲಾ ಆದ ಬಳಿಕ ಟಿವಿ ಚಾನೆಲೊಂದು ಆಕೆಯನ್ನು ಸ್ಟುಡಿಯೋಕ್ಕೆ ಕರೆಸಿ ‘ದೈತ್ಯ’ ಮಾಡೆಲ್ ಬಾಗಿಲ ತೂತಿನಲ್ಲಿ ತೂರೋದು ಅಸಾಧ್ಯ ಎಂಬ ಬಗ್ಗೆ ಪ್ರಾತ್ಯಕ್ಷಿಕೆಯನ್ನೂ ಮಾಡಿತು!

ಜಿಪುಣ ಗಂಡನಿಗೆ ಲಕ್ಷ ಗುಲಾಬಿ ನೀಡೋ ಶಿಕ್ಷೆ!

ಟೆಹ್ರಾನ್: ಚಿನ್ನಾ ನೀನಿಲ್ದೆ ನಾ ಇರೋದು ಹೇಗೆ ಹೇಳು, ಏಳೇಳು ಜನ್ಮಕ್ಕೂ ನೀನೇ ನನ್ನವಳು ಎಂದು ಹೇಳಬೇಕಾದ ಸಮಯದಲ್ಲಿ ‘ಜಿಪುಣತನ’ ತೋರಿದ ಪತಿರಾಯ ಪಶ್ಚಾತ್ತಾಪ ಪಡ್ತಾ ಇದ್ದಾನೆ. ಜಿಪುಣತನಕ್ಕಾಗಿ ನ್ಯಾಯಾಲಯ ಪತ್ನಿಗೆ ೧ ಲಕ್ಷದ ೨೪ ಸಾವಿರ ಗುಲಾಬಿ ಹೂವುಗಳನ್ನು ನೀಡುವಂತೆ ತೀರ್ಪು ನೀಡಿದೆ. ಇದಕ್ಕೆಲ್ಲಾ ಕಾರಣವಾಗಿದ್ದು ಇರಾನ್‌ನಲ್ಲಿರುವ ಕಾನೂನು. ಪತಿರಾಯನಿಗೆ ನೀಡಿದ ವರದಕ್ಷಿಣೆಯನ್ನು ಮದುವೆಯಾದ ನಂತರ ಅಥವಾ ವಿಚ್ಛೇದನ ವೇಳೆ ಪಡೆಯಬಹುದು ಎನ್ನುತ್ತದೆ ಕಾನೂನು. ಶಹೀನ್- ಹೆಂಗಾಮೇಹ್ ದಾಂಪತ್ಯಕ್ಕೆ ೧೦ ವರ್ಷ ಸಂದಿದೆ. ಆದರೆ ಆರಂಭದಲ್ಲೇ ಆಕೆಯೊಡನೆ ಸರಸವಾಡುವುದನ್ನು ಬಿಟ್ಟು ಆತ ತನ್ನ ಜಿಪುಣತನ ತೋರಲಾರಂಭಿಸಿದ. ಇದರಿಂದ ಉಗ್ರಸ್ವರೂಪಿಣಿಯಾದ ಆಕೆ ಕಾಫಿಯ ಹಣ ಕೊಡಲು ಹಿಂಜರಿಯುತ್ತಿದ್ದ ಪತಿ ವರದಕ್ಷಿಣೆಯನ್ನು ಗುಲಾಬಿ ರೂಪದಲ್ಲೇ ಬೇಕೆಂದು ಹಠ ಹಿಡಿದಿದ್ದಳು. ಆದರೆ ನ್ಯಾಯಾಲಯದಲ್ಲೂ ಪತಿರಾಯ ಜಿಪುಣತನ ಬಿಡಲಿಲ್ಲ. ದಿನಕ್ಕೆ ೫ ಗುಲಾಬಿ ಹೂ ನೀಡಲಷ್ಟೇ ಸಾಧ್ಯ ಎಂದಿದ್ದಾನೆ. ನ್ಯಾಯಾಲಯ ೬೪ ಸಾವಿರ ಡಾಲರ್ ಮೊತ್ತದ ಆತನ ಅಪಾರ್ಟ್‌ಮೆಂಟನ್ನು ಸ್ವಾಧೀನ ಪಡಿಸಿದೆ. ಹೆಂಗಾಮೇಹ್ ನಗುವಾ... ಗುಲಾಬಿ ಹೂವೇ... ಎಂದು ಗುಲಾಬಿಗಾಗಿ ಕಾಯುತ್ತಿದ್ದರೆ ಪತಿ ಶಾಹಿನ್‌ಗೆ ಮೈಯೆಲ್ಲಾ ಮುಳ್ಳುತಾಕುತ್ತಿರುವ ಅನುಭವ!

ಬ್ರಿಟನ್ನಲ್ಲಿ ದಾದಿಯರ ಸರಸವಿದೇನೇ!

ಲಂಡನ್: ಅಯ್ಯೋ ಆಸ್ಪತ್ರೆ ವಾಸ ಯಾರಿಗೆ ಬೇಕು, ನನ್ನನ್ನು ಹೇಗಾದರೂ ಮಾಡಿ ಇಲ್ಲಿಂದ ಕರೆದುಕೊಂಡು ಹೋಗಿ ಎನ್ನುವ ಆಸ್ಪತ್ರೆಗೆ ದಾಖಲಾದ ರೋಗಿಗಳ ಆರ್ತನಾದ ನಾವು ಕೇಳಿರುತ್ತೇವೆ. ಆದರೆ, ಬ್ರಿಟನ್ ಕಥೇನೇ ಬೇರೆ. ಅಲ್ಲಿ ದಾದಿಯರ ಸೇವೆ ಪಡೆಯುತ್ತಿರುವ ‘ಪುರುಷ’ ರೋಗಿಗಳು ಇಂತಹ ಸೊಲ್ಲೆತ್ತುವುದಿಲ್ಲ. ಕಾರಣ, ಅವರಿಗೆ ಆಸ್ಪತ್ರೆಯಲ್ಲಿದ್ದರೆ ದಾದಿಯರ ‘ಸಾಂಗತ್ಯ’ ದೊರಕುತ್ತದೆ! ಇಲ್ಲಿನ ಪ್ರತಿ ೧೦ ದಾದಿಯರಲ್ಲಿ ಒಬ್ಬಾಕೆ ರೋಗಿಯ ಜತೆ ಸರಸ, ಸಲ್ಲಾಪಗಳಲ್ಲಿ ತೊಡಗುತ್ತಾರೆ ಎಂದು ನರ್ಸಿಂಗ್ ಟೈಮ್ಸ್ ನಿಯತಕಾಲಿಕೆ ತನ್ನ ಸಮೀಕ್ಷಾ ವರದಿಯಲ್ಲಿ ಹೇಳಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಆರರಲ್ಲಿ ಒಬ್ಬರು ದಾದಿಯರು ರೋಗಿಗಳ ಜತೆ ‘ರಹಸ್ಯ’ ಲೈಂಗಿಕ ಸಂಬಂಧವಿರಿಸಿದ್ದನ್ನು ಒಪ್ಪಿಕೊಂಡಿದ್ದಾರೆ. ಇದರಲ್ಲಿ ಕೆಲವು ಮದುವೆಯಲ್ಲಿ ಪರ್ಯವಸಾನಗೊಂಡದ್ದೂ ಇದೆ. ಇನ್ನೊಂದು ಸಂಗತಿ ಗೊತ್ತಾ ನಿಮಗೆ? ಬ್ರಿಟನ್‌ನಲ್ಲಿ ಒಟ್ಟಾರೆ ೪ ಲಕ್ಷ ದಾದಿಯರಿದ್ದಾರೆ. ಇವರಲ್ಲಿ ಹೆಚ್ಚಿನವರು ಭಾರತೀಯ ನಾರಿಯರು! ರೋಗಿಯ ಜತೆ ಸರಸ, ಸಂಬಂಧಗಳ ಬಗ್ಗೆ ತಲೆಕೆಡಿಸಿಕೊಂಡಿರುವ ಇಲ್ಲಿನ ಆರೋಗ್ಯ ರಕ್ಷಾ ನಿಯಂತ್ರಣ ಪ್ರಾಧಿಕಾರ ಹೊಸ ರೋಗಿಯ ಜತೆ ಲೈಂಗಿಕ ಸಂಬಂಧ ಇಟ್ಟುಕೊಂಡರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.