Tuesday, January 8, 2008

ಖಿನ್ನ ಹೆಂಗಸರು ಪರಿಮಳ ಸೂಸುತ್ತಾರೆ!

ಮಹಿಳೆಯರು ಹೆಚ್ಚೆಚ್ಚು ಪರ್‌ಫ್ಯೂಮ್ ಹಾಕಿಕೊಳ್ಳುತ್ತಿದ್ದಾರೆ ಎಂದರೆ ಏನರ್ಥ? ಹಾಗೇ ಬಂದರೆ ವಾಸನೆ ಹೊಡೆಯಬಹುದು ಎಂದಷ್ಟೇ ಅರ್ಥವಲ್ಲ. ಅವರು ಖಿನ್ನತೆಯಿಂದ ಬಳಲುತ್ತಿದ್ದಾರೆ ಹಾಗೂ ಅಪಾಯದಲ್ಲಿದ್ದಾರೆ ಎಂದೂ ಅರ್ಥ. ಇಸ್ರೇಲಿನ ಸಂಶೋಧಕರು ಪತ್ತೆಹಚ್ಚಿದ ಗಂಭೀರ ವಿಷಯವಿದು. ಇದನ್ನು ಬ್ರಿಟನ್ನಿನ ‘ಡೇಲಿ ಟೆಲಿಗ್ರಾಫ್’ ಯಥಾವತ್ತು ವರದಿ ಮಾಡಿದೆ.
‘ನಮ್ಮ ಸಂಶೋಧನೆಯ ಪ್ರಕಾರ, ಖಿನ್ನತೆಯಿಂದ ಬಳಲುವ ಮಹಿಳೆಯರು ಪರಿಮಳ ಗ್ರಹಿಸುವ ಶಕ್ತಿ ಕಳೆದುಕೊಳ್ಳುತ್ತಾರೆ. ಹಾಗಾಗಿ, ಸಿಕ್ಕಾಪಟ್ಟೆ ಸೆಂಟ್ ಸುರುವಿಕೊಳ್ಳುತ್ತಾರೆ. ಅದೊಂದು ಕಾಯಿಲೆ; ಬರೀ ಮಾನಸಿಕ ಸಮಸ್ಯೆಯಷ್ಟೇ ಅಲ್ಲ, ದೈಹಿಕವಾಗಿಯೂ ನಷ್ಟ ಉಂಟುಮಾಡಬಲ್ಲದು’ ಎಂದು ಸಂಶೋಧಕರು ಹೇಳಿದ್ದಾರೆ. ಹಾಗಾಗಿ, ಹೆಂಡತಿ ಹತ್ತಿರ ಬಂದಾಗ ಸಕ್ಕತ್ ಪರಿಮಳ ಬರುತ್ತಿದ್ದರೆ ಗಂಡ ಇನ್ನು ಮುಂದೆ ಖುಷಿಪಡುವಂತಿಲ್ಲ, ಆಸ್ಪತ್ರೆಯ ದಾರಿ ಹುಡುಕಬೇಕು!

No comments: