Tuesday, January 8, 2008

ಈಕೆಗೆ 10 ಜನರೊಂದಿಗೆ ‘honey’moon ಭಾಗ್ಯ!

ಗಂಡ ಮಧುಚಂದ್ರಕ್ಕೆ (honeymoon) ಕರೆದೊಯ್ದಿಲ್ಲಾ ಎಂದು ಕೆಂಡಕಾರುವ ಪತ್ನಿಯರಿಗೊಂದು ಹೊಟ್ಟೆಕಿಚ್ಚಿನ ಸುದ್ದಿ. ಕ್ಯೂಬಾದ ಮಹಿಳೆಯೊಬ್ಬಳು ಬರೋಬ್ಬರಿ 10 ಸಲ ಮಧುಚಂದ್ರ ಯಾತ್ರೆ ಮುಗಿಸುವಲ್ಲಿ ಯಶಸ್ವಿಯಾಗಿದ್ದಾಳಂತೆ.

ವಿಷಯ ಇಷ್ಟೇ ಆಗಿದ್ದರೆ ಅದರಲ್ಲಿ ಗಮ್ಮತ್ತು ಇರಲಿಲ್ಲ. ಈಕೆ 10 ಬಾರಿ ಮಧುಚಂದ್ರ ಮುಗಿಸಿದ್ದು 10 ಜನ ಗಂಡಂದಿರೊಂದಿಗೆ ಎಂಬುದೇ ಕರಾಮತ್ತಿನ ವಿಷಯ. ಇಲ್ಲಿನ ಎನೂಸಿ ಲೋಪೆಜ್ ಎಂಬ 26 ವರ್ಷದ ಯುವತಿ ತಾನಿನ್ನೂ ಕನ್ಯೆ ಎಂದು ಘೋಷಿಸಿಕೊಳ್ಳುತ್ತಲೇ ಕಳೆದ 4 ವರ್ಷದ ಅವಧಿಯಲ್ಲಿ 10 ಪುರುಷರನ್ನು ವರಿಸಿದ್ದಳಂತೆ.

ಮದುವೆಯಾಗಿದ್ದು ಸಾಲದೆಂಬಂತೆ ಪ್ರತಿಯೊಬ್ಬರೊಂದಿಗೂ ಮೋಜಿನ honeymoon ಮುಗಿಸಿದ ಭಾರಿ ಗಟ್ಟಿಗಿತ್ತಿ ಎನ್ನಿಸಿಕೊಂಡಿದ್ದಾಳೆ. ಮೊದಲು ಬೇರೆ ಬೇರೆ ದೇಶದ ವ್ಯಕ್ತಿಗಳೊಂದಿಗೆ ಮದುವೆ, ಕೊನೆಗೆ ಮಧುಚಂದ್ರ ಆಮೇಲೆ, ವೀಸಾ ಮತ್ತಿತರ ಕೆಲಸಕ್ಕೆ ಹಣ ಬೇಡುವುದು, ಕೊಡಲಿಲ್ಲವೆಂದರೆ ದೂರು ಕೊಡುವುದಾಗಿ ಬೆದರಿಕೆ ಹಾಕುವುದು ಇವಳ ಕಾಯಕವಾಗಿತ್ತಂತೆ. ಯಾರಿಗೂ ವಿಚ್ಛೇದನ ಕೊಡದೆಯೇ ಈ ‘Honey’ ಮತ್ತೊಬ್ಬರನ್ನು ವರಿಸುತ್ತಿದ್ದಳಂತೆ. ವಿಷಯ ಪೊಲೀಸರಿಗೆ ತಿಳಿದ ಮೇಲೆ ಇದೀಗ ಜೈಲಿನಲ್ಲಿ ‘Honey’ ಇಲ್ಲದೆ ರಾತ್ರಿ ಹೊತ್ತು ‘Moon’ ನೋಡ್ತಾ ಇದ್ದಾಳಂತೆ.

2 comments:

naasomeswara said...

ಓರ್ವ ಹೆಣ್ಣು ಕನ್ಯೆಯೇ ಅಲ್ಲವೇ ಎಂದು ಹೇಳಲು, ಆಕೆಗೆ ಕನ್ಯಾಪೊರೆ ಸಮಗ್ರವಾಗಿದೆಯೇ ಇಲ್ಲವೇ ಎಂಬುದನ್ನು ನೋಡಬೇಕಾಗುತ್ತದೆ. ಕೆಲವು ಮಹಿಳೆಯರಲ್ಲಿ ಅಪರೂಪಕ್ಕೆ `ಎಲಾಸ್ಟಿಕ್ ಹೈಮೆನ್` ಇರುತ್ತದೆ. ಇದು ನಿತ್ಯ ಸಂಭೋಗದಲ್ಲಿ ಮಾತ್ರವಲ್ಲ, ಶಿಶು ಪ್ರಸವದಲ್ಲೂ ಸಹಾ ಛಿದ್ರವಾಗುವುದಿಲ್ಲ. ಹಾಗಾಗಿ ಇಂತಹ ಮಹಿಳೆಯರು ನಿತ್ಯ ಕನ್ಯೆಯರು! ಈ ದಶಪತಿ ಪಾರಾಯಣೆಗೆ ಇಂಥ ಕನ್ಯಾಪೊರೆ ಇದ್ದಿರಬೇಕು. ಪೋಲಿಮನೆ ಚೆನ್ನಾಗಿದೆ. ಇಂತಹ ಮತ್ತಷ್ಟು ಮನೆಗಳನ್ನು ಕಟ್ಟಿ.
-ನಾಸೋಮೇಶ್ವರ

Anonymous said...

ಹೌದಾ? ನಮ್ಮ ಕತೆಯ ಹೀರೊ ಏಳು ದಿನಕ್ಕೆ ಏಳು ಹೆಣ್ಣುಗಳೊಂದಿಗೆ ಸರಸವಾಡಿ ರೆಕಾರ್ಡ್ ಮುರಿದಿದ್ದಾನೆ

ಭೇಟಿ ನೀಡಿ ಇಂತಾ ಒರಿಜಿನಲ್ ಕತೆಗಳಿಗೆ
shrungara.blogspot.com