Tuesday, January 8, 2008

ಈಕೆಗೆ 10 ಜನರೊಂದಿಗೆ ‘honey’moon ಭಾಗ್ಯ!

ಗಂಡ ಮಧುಚಂದ್ರಕ್ಕೆ (honeymoon) ಕರೆದೊಯ್ದಿಲ್ಲಾ ಎಂದು ಕೆಂಡಕಾರುವ ಪತ್ನಿಯರಿಗೊಂದು ಹೊಟ್ಟೆಕಿಚ್ಚಿನ ಸುದ್ದಿ. ಕ್ಯೂಬಾದ ಮಹಿಳೆಯೊಬ್ಬಳು ಬರೋಬ್ಬರಿ 10 ಸಲ ಮಧುಚಂದ್ರ ಯಾತ್ರೆ ಮುಗಿಸುವಲ್ಲಿ ಯಶಸ್ವಿಯಾಗಿದ್ದಾಳಂತೆ.

ವಿಷಯ ಇಷ್ಟೇ ಆಗಿದ್ದರೆ ಅದರಲ್ಲಿ ಗಮ್ಮತ್ತು ಇರಲಿಲ್ಲ. ಈಕೆ 10 ಬಾರಿ ಮಧುಚಂದ್ರ ಮುಗಿಸಿದ್ದು 10 ಜನ ಗಂಡಂದಿರೊಂದಿಗೆ ಎಂಬುದೇ ಕರಾಮತ್ತಿನ ವಿಷಯ. ಇಲ್ಲಿನ ಎನೂಸಿ ಲೋಪೆಜ್ ಎಂಬ 26 ವರ್ಷದ ಯುವತಿ ತಾನಿನ್ನೂ ಕನ್ಯೆ ಎಂದು ಘೋಷಿಸಿಕೊಳ್ಳುತ್ತಲೇ ಕಳೆದ 4 ವರ್ಷದ ಅವಧಿಯಲ್ಲಿ 10 ಪುರುಷರನ್ನು ವರಿಸಿದ್ದಳಂತೆ.

ಮದುವೆಯಾಗಿದ್ದು ಸಾಲದೆಂಬಂತೆ ಪ್ರತಿಯೊಬ್ಬರೊಂದಿಗೂ ಮೋಜಿನ honeymoon ಮುಗಿಸಿದ ಭಾರಿ ಗಟ್ಟಿಗಿತ್ತಿ ಎನ್ನಿಸಿಕೊಂಡಿದ್ದಾಳೆ. ಮೊದಲು ಬೇರೆ ಬೇರೆ ದೇಶದ ವ್ಯಕ್ತಿಗಳೊಂದಿಗೆ ಮದುವೆ, ಕೊನೆಗೆ ಮಧುಚಂದ್ರ ಆಮೇಲೆ, ವೀಸಾ ಮತ್ತಿತರ ಕೆಲಸಕ್ಕೆ ಹಣ ಬೇಡುವುದು, ಕೊಡಲಿಲ್ಲವೆಂದರೆ ದೂರು ಕೊಡುವುದಾಗಿ ಬೆದರಿಕೆ ಹಾಕುವುದು ಇವಳ ಕಾಯಕವಾಗಿತ್ತಂತೆ. ಯಾರಿಗೂ ವಿಚ್ಛೇದನ ಕೊಡದೆಯೇ ಈ ‘Honey’ ಮತ್ತೊಬ್ಬರನ್ನು ವರಿಸುತ್ತಿದ್ದಳಂತೆ. ವಿಷಯ ಪೊಲೀಸರಿಗೆ ತಿಳಿದ ಮೇಲೆ ಇದೀಗ ಜೈಲಿನಲ್ಲಿ ‘Honey’ ಇಲ್ಲದೆ ರಾತ್ರಿ ಹೊತ್ತು ‘Moon’ ನೋಡ್ತಾ ಇದ್ದಾಳಂತೆ.

ಪುರುಷರಿಗೆ ಕೆಲಸಕ್ಕಿಂತಲೂ ‘ಅದೇ’ ಮುಖ್ಯ!

ಮನೆಗೆಲಸ ರಾಶಿಯಷ್ಟು ಬಾಕಿಯಿದ್ದರೂ ಗಂಡ ಹೆಂಡತಿಯನ್ನು ಸರಸಕೆ ಬಾರೇ ಎಂದು ಕರೆಯುತ್ತಾನೆ. ಆದರೆ ಈ ಕೆಲಸಗಳನ್ನೆಲ್ಲಾ ಯಾರು ಮಾಡೋದು ಎಂದು ಮರುಪ್ರಶ್ನೆ ಎಸೆದು ಎಲ್ಲಾ ಕರ್ತವ್ಯ ಮುಗಿಸಿದ್ಮೇಲಷ್ಟೇ ಹೆಂಡತಿ ಪ್ರೇಮ ಸಲ್ಲಾಪಕ್ಕೆ ಬರುತ್ತಾಳೆ.
ಹೌದು, ಗಂಡು ಕೆಲಸ, ಕರ್ತವ್ಯ ಎಲ್ಲವನ್ನೂ ಬಿಟ್ಟು ‘ಸೆಕ್ಸ್’ಗೇ ಮೊದಲ ಆದ್ಯತೆ ನೀಡುತ್ತಾನೆ. ಆದರೆ ಸೆಕ್ಸ್‌ಗಾಗಿ ಕೆಲಸ ಬದಿಗಿಡಲು ಹೆಣ್ಣು ನಿರಾಕರಿಸುತ್ತಾಳೆ. ಅಂತಾರಾಷ್ಟ್ರೀಯ ಸಂಶೋಧಕರ ತಂಡವೊಂದು ಈ ಸಂಶೋಧನೆ ನಡೆಸಿದೆ. ಕರ್ತವ್ಯವನ್ನು ತ್ಯಾಗ ಮಾಡಿಯಾದರೂ ಸರಿ, ಪುರುಷ ಪ್ರೀತಿ ಮಾಡತೊಡಗುತ್ತಾನೆ.
ಆದರೆ ಮಹಿಳೆಯರು ಹಾಗಲ್ಲ, ತಮ್ಮ ವೃತ್ತಿಗೆ ಬದ್ಧವಾಗಿರುತ್ತಾರೆ. ಪ್ರೀತಿ, ಪ್ರೇಮಕ್ಕಿಂತಲೂ ಅವರಿಗೆ ಗುರಿಯೇ ಮುಖ್ಯವಾಗಿರುತ್ತದೆ ಎಂದು ಸಂಶೋಧನೆ ನಡೆಸಿದ ತಂಡದ ಮುಖ್ಯಸ್ಥ ಶೆರೋನ್ ಡಾನೋಫ್ ಬರ್ಗ್ ವಿವರಿಸುತ್ತಾರೆ. ಈ ಅಧ್ಯಯನದಿಂದ ಕಂಡುಬಂದ ಇನ್ನೊಂದು ಸಂಗತಿ, ಪುರುಷರು ಸ್ನೇಹಿತರಿಂದ ಹೆಚ್ಚಿನ ಭಾವನಾತ್ಮಕ ಬೆಂಬಲ ಗಳಿಸುತ್ತಾರೆ.

ಖಿನ್ನ ಹೆಂಗಸರು ಪರಿಮಳ ಸೂಸುತ್ತಾರೆ!

ಮಹಿಳೆಯರು ಹೆಚ್ಚೆಚ್ಚು ಪರ್‌ಫ್ಯೂಮ್ ಹಾಕಿಕೊಳ್ಳುತ್ತಿದ್ದಾರೆ ಎಂದರೆ ಏನರ್ಥ? ಹಾಗೇ ಬಂದರೆ ವಾಸನೆ ಹೊಡೆಯಬಹುದು ಎಂದಷ್ಟೇ ಅರ್ಥವಲ್ಲ. ಅವರು ಖಿನ್ನತೆಯಿಂದ ಬಳಲುತ್ತಿದ್ದಾರೆ ಹಾಗೂ ಅಪಾಯದಲ್ಲಿದ್ದಾರೆ ಎಂದೂ ಅರ್ಥ. ಇಸ್ರೇಲಿನ ಸಂಶೋಧಕರು ಪತ್ತೆಹಚ್ಚಿದ ಗಂಭೀರ ವಿಷಯವಿದು. ಇದನ್ನು ಬ್ರಿಟನ್ನಿನ ‘ಡೇಲಿ ಟೆಲಿಗ್ರಾಫ್’ ಯಥಾವತ್ತು ವರದಿ ಮಾಡಿದೆ.
‘ನಮ್ಮ ಸಂಶೋಧನೆಯ ಪ್ರಕಾರ, ಖಿನ್ನತೆಯಿಂದ ಬಳಲುವ ಮಹಿಳೆಯರು ಪರಿಮಳ ಗ್ರಹಿಸುವ ಶಕ್ತಿ ಕಳೆದುಕೊಳ್ಳುತ್ತಾರೆ. ಹಾಗಾಗಿ, ಸಿಕ್ಕಾಪಟ್ಟೆ ಸೆಂಟ್ ಸುರುವಿಕೊಳ್ಳುತ್ತಾರೆ. ಅದೊಂದು ಕಾಯಿಲೆ; ಬರೀ ಮಾನಸಿಕ ಸಮಸ್ಯೆಯಷ್ಟೇ ಅಲ್ಲ, ದೈಹಿಕವಾಗಿಯೂ ನಷ್ಟ ಉಂಟುಮಾಡಬಲ್ಲದು’ ಎಂದು ಸಂಶೋಧಕರು ಹೇಳಿದ್ದಾರೆ. ಹಾಗಾಗಿ, ಹೆಂಡತಿ ಹತ್ತಿರ ಬಂದಾಗ ಸಕ್ಕತ್ ಪರಿಮಳ ಬರುತ್ತಿದ್ದರೆ ಗಂಡ ಇನ್ನು ಮುಂದೆ ಖುಷಿಪಡುವಂತಿಲ್ಲ, ಆಸ್ಪತ್ರೆಯ ದಾರಿ ಹುಡುಕಬೇಕು!

ಉಗಾಂಡದಲ್ಲಿ ಸೆಕ್ಸ್ ಗಿಡಕ್ಕೆ ಗಂಡಾಂತರ!

‘ತೆಂಗಿನ ಮರದ ಎಳೆಯ ಗರಿಯಲ್ಲಿರುವ ಪುಡಿ ತಿನ್ನಿ, ಲೈಂಗಿಕ ಶಕ್ತಿ ಹೆಚ್ಚಾಗುತ್ತೆ ಅಂದ್ರೆ ಯಾರೂ ಕೇಳೋದಿಲ್ಲ. ವಯಾಗ್ರಾ ಅಂತ ಸಾಯ್ತಾರೆ’ ಎಂದು ಭಾರತದ ಆಯುರ್ವೇದ ತಜ್ಞರು ಬೊಬ್ಬೆ ಹಾಕುತ್ತಾರೆ.
ಆದರೆ, ಉಗಾಂಡಾದಲ್ಲಿ ಹಾಗಲ್ಲ. ಅಲ್ಲಿ ವಯಾಗ್ರಾವನ್ನು ಕೇಳುವವರೇ ಇಲ್ಲ. ಏಕೆಂದರೆ, ಅಲ್ಲಿ ಸಿಟ್ರಾಪ್ಸಿಸ್ ಹೆಸರಿನ ಸೆಕ್ಸ್ ಗಿಡವೊಂದಿದೆ. ಅದು ಅಲ್ಲಿನ ಲೋಕಲ್ ವಯಾಗ್ರಾ. ಅದರ ಎಲೆ ತಿಂದರೆ ಸಾಕು, 3 ಗಂಟೆಯಲ್ಲಿ ಎಂತಹ ನಿಶ್ಶಕ್ತರೂ ಹಾಸಿಗೆ ವೀರರಾಗುತ್ತಾರೆ. ಇಷ್ಟೇ ಆಗಿದ್ದರೆ ಸಕ್ಕತ್ತಾಗಿದೆ ಎಂದು ಖುಷಿಪಟ್ಟು, ಆ ಗಿಡ ತರಿಸಿಕೊಳ್ಳುವ ಬಗ್ಗೆ ಯೋಚಿಸಬಹುದಿತ್ತು.
ಆದರೆ, ಉಗಾಂಡಾದ ಗಂಡಸರು ಈ ಗಿಡದ ಎಲೆ, ಕಾಂಡ, ಬೇರು ಒಂದನ್ನೂ ಬಿಡದೆ ಹರಿದು ತಿಂದು ಮಜಾ ಉಡಾಯಿಸುತ್ತಿರುವ ಕಾರಣ ಈಗ ಈ ಸೆಕ್ಸ್ ಗಿಡಕ್ಕೇ ವಯಾಗ್ರಾ ಕೊಟ್ಟು ಬೆಳೆಸುವ ಸ್ಥಿತಿ ಬಂದಿದೆ!
ಉಗಾಂಡಾದಲ್ಲಿ ಶೇ.80ರಷ್ಟು ಮಂದಿ ಎಲ್ಲ ರೋಗಕ್ಕೂ ಗಿಡಮೂಲಿಕೆಯನ್ನೇ ಬಳಸುತ್ತಾರೆ. ಅಲ್ಲೀಗ ಲೈಂಗಿಕ ರೋಗಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೆಕ್ಸ್ ಗಿಡವನ್ನು ಉಳಿಸಿದರಷ್ಟೇ ಸಾಲದು, ನೀಲಗಿರಿ ತೋಪು ಬೆಳೆಸಿದಂತೆ ಬೆಳೆಸಬೇಕಾದೀತು!

Thursday, December 27, 2007

‘ಸ್ವೀಟ್’ ಸಿಕ್ಸ್ ಟೀನ್


ಪೋಲಿ ಹುಡುಗರು ‘ಹಾಯ್ ಸ್ವೀಟಿ’ ಎಂದು ಅರ್ಥಪೂರ್ಣವಾಗಿ ಚುಡಾಯಿಸಬಹುದಾದ ಬೆಡಗಿ ಈಕೆ. ಸಿಹಿ ತುಟಿಯಲ್ಲೊಂದೇ ಅಲ್ಲ, ಕಟಿಯಲ್ಲೂ! ಇವಳು ತೊಟ್ಟಿರುವುದು ಚಾಕೊಲೆಟ್ ಮಿನಿ. ಸ್ವಿಸ್ ವಿನ್ಯಾಸಗಾರನೊಬ್ಬ ಇತ್ತೀಚೆಗೆ ಲಂಡನ್ನಿನಲ್ಲಿ ಇದನ್ನು ಪ್ರದರ್ಶಿಸುತ್ತ 70,000 ಕ್ಯಾಲರಿಯ ಚಾಕೊಲೆಟ್‌ಗಳು ಈಕೆಯ ಸೊಂಟದಲ್ಲಿವೆ ಎಂದು ಘೋಷಿಸಿ ನೆರೆದವರಲ್ಲಿ ನೀರೂರಿಸಿದ. ಪುಟ್ಟ ಹುಡುಗರು ಇವಳತ್ತ ಆಸೆಗಣ್ಣಿಂದ ನೋಡಿದರೆ ಪಾಲಕರು ತಪ್ಪು ತಿಳಿದುಕೊಳ್ಳಬಾರದು.

ಸಾಕಾ, ಇನ್ನೂ ಬೇಕಾ?


ಗಗನಸಖಿಯರು ಸುಂದರವಾಗಿರುತ್ತಾರೆ. ಅದು ಮಲ್ಯರ ವಿಮಾನವಾಗಿದ್ದರೆ ಸೆಕ್ಸಿಯಾಗಿಯೂ ಇರುತ್ತಾರೆ. ‘ಗುಂಡು’ ಸಪ್ಲೈ ಮಾಡುವ ವಿದೇಶೀ ವಿಮಾನವಾಗಿದ್ದರೆ ಇರುವುದಕ್ಕಿಂತ ಹೆಚ್ಚು ಸೆಕ್ಸಿಯಾಗಿ ಮತ್ತು ಸುಂದರವಾಗಿ ಕಾಣುತ್ತಾರೆ. ಆಗ ಒಮ್ಮೊಮ್ಮೆ ಎಡವಟ್ಟುಗಳಾಗುತ್ತವೆ. ಅದನ್ನು ತಡೆಯಲು ಅಮೆರಿಕದಲ್ಲಿ ಗಗನಸಖಿಯರಿಗೆ ಈ ತರಬೇತಿ. ಈತ ರಬ್ಬರ್ ಮನುಷ್ಯ. ವಿಮಾನದಲ್ಲಿ ತರಲೆ ಮಾಡುವವರಿಗೆ ಕಾಲೂ ಇರುತ್ತದೆ ಎಂಬುದು ನೆನಪಿರಬೇಕು.

Monday, December 24, 2007

ಅವು ಕಿರುಚದಿದ್ದರೆ ಇವು ಸ್ಖಲಿಸುವುದಿಲ್ಲ!




ಲೈಂಗಿಕ ಕ್ರಿಯೆ ನಡೆಯುವಾಗ ಜೋರಾಗಿ ಕಿರುಚಾಟ ಕೇಳಿಸುತ್ತಿದೆ ಎಂದರೆ ಏನರ್ಥ? ನಿಜ ಜೀವನದಲ್ಲಾದರೆ- ಏನೋ ಎಡವಟ್ಟಾಗಿದೆ. ಬ್ಲೂ ಫಿಲಂನಲ್ಲಾದರೆ- ನೋಡುಗರನ್ನು ಉದ್ರೇಕಗೊಳಿಸುವ ಸ್ಟಂಟ್. ಆದರೆ, ಮಂಗಗಳು ಸೆಕ್ಸ್‌ನಲ್ಲಿ ತೊಡಗಿದ್ದಾಗ ಸಿಕ್ಕಾಪಟ್ಟೆ ಕಿರುಚುತ್ತವೆ. ಕಿರುಚುವುದು ಹೆಣ್ಣು ಮಂಗ ಮಾತ್ರ ಏಕಿರಬಹದು? ಏಕೆಂದರೆ, ಅವು ಹಾಗೆ ಕರ್ರೋಪರ್ರೋ ಕಿರುಚಿದರೆ ಮಾತ್ರ ಗಂಡು ಮಂಗಕ್ಕೆ ಸ್ಖಲನವಾಗುತ್ತದೆ. ಇಲ್ಲವಾದರೆ ಅಷ್ಟೊತ್ತು ಗುದ್ದಾಡಿದ್ದು ವೇಸ್ಟ್!

ಇಂತಹ ಗಂಭೀರ ವಿಷಯವನ್ನು ಪತ್ತೆ ಹಚ್ಚಿ ಜಗತ್ತಿಗೆ ಸಾರಿದವರು ಬ್ರಿಟನ್ನಿನ ಪ್ರಾಣಿ ಶಾಸ್ತ್ರಜ್ಞರು. ಮಂಗಗಳು ಮಂಗಾಟವಾಡುವುದನ್ನೇ ಅನೇಕ ವರ್ಷಗಳ ಕಾಲ ತಾಳ್ಮೆಯಿಂದ ಕದ್ದು ನೋಡಿ, ಅವುಗಳ ಕಿರುಚಾಟ ಅರಚಾಟವನ್ನೆಲ್ಲಾ ಕೇಳಿ ಈ ಫಲಿತಾಂಶ ಪಡೆದಿದ್ದಾರೆ.

ಹೀಗೆ ಕೂಗುವುದರಿಂದ ಹೆಣ್ಣು ಮಂಗಗಳು ಗಂಡು ಮಂಗಕ್ಕೆ ಮತ್ತಷ್ಟು ಆಕರ್ಷಕವಾಗಿ ಕಾಣುತ್ತವೆಯಂತೆ. ಅಷ್ಟೇ ಅಲ್ಲ, ಆಗ ಸ್ಖಲಿಸುವ ವೀರ್ಯದ ಪ್ರಮಾಣವೂ ಹೆಚ್ಚಿರುತ್ತದೆಯಂತೆ. ಗಂಡು ಮಂಗದ ಹೊಡೆತವೂ ಹೆಚ್ಚೆಚ್ಚು ವೇಗ ಪಡೆಯುತ್ತದೆಯಂತೆ!

‘59 ಜೋಡಿ ಮಂಗಗಳು ಮೈಥುನದಲ್ಲಿ ತೊಡಗಿದ್ದನ್ನು ಅಧ್ಯಯನ ಮಾಡಿದೆವು. ಹೆಣ್ಣು ಮಂಗ ಜೋರಾಗಿ ಕಿರುಚುತ್ತಿದ್ದಾಗ ೫೯ ಗಂಡು ಮಂಗಗಳು ಯಶಸ್ವಿಯಾಗಿ ಸ್ಖಲಿಸಿದವು. ಅವು ಕಿರುಚದೇ ಇದ್ದಾಗ ಶೇ.2ರಷ್ಟು ಕಡಮೆ ಸ್ಖಲಿಸಿದವು’ ಎಂದು ಮಂಗನ ತಜ್ಞರು ಹೇಳಿದ್ದಾರೆ.

ಮಂಗಗಳಿಗೆ ವಿಜ್ಞಾನಿಗಳು ಕೊಟ್ಟ ಕಾಟ ಇಷ್ಟಕ್ಕೇ ಮುಗಿದಿಲ್ಲ. ಸೆಕ್ಸ್ ಮಾಡುವಾಗ ಗಂಡು ಮಂಗ ಎಷ್ಟು ಏಟು ಹಾಕುತ್ತದೆ ಎಂಬುದನ್ನೂ ಲೆಕ್ಕಹಾಕಿದ್ದಾರೆ. ಏಟು ಜೋರಾದಂತೆಲ್ಲ ಕಿರುಚಾಟ ಜೋರಾಗುತ್ತದೆ, ಕಿರುಚಾಟ ಜೋರಾದಂತೆ ಏಟೂ ಜೋರಾಗುತ್ತದೆ ಎಂಬ ಮಹದ್ವಿಷಯವನ್ನೂ ಅವರು ಹೊರಹಾಕಿದ್ದಾರೆ.

ಈ ವಿಜ್ಞಾನಿಗಳಿಗೆ ಮಾಡಲು ಬೇರೆ ಕೆಲಸ ಇಲ್ಲವೇ?