Tuesday, January 8, 2008

ಪುರುಷರಿಗೆ ಕೆಲಸಕ್ಕಿಂತಲೂ ‘ಅದೇ’ ಮುಖ್ಯ!

ನೆಗೆಲಸ ರಾಶಿಯಷ್ಟು ಬಾಕಿಯಿದ್ದರೂ ಗಂಡ ಹೆಂಡತಿಯನ್ನು ಸರಸಕೆ ಬಾರೇ ಎಂದು ಕರೆಯುತ್ತಾನೆ. ಆದರೆ ಈ ಕೆಲಸಗಳನ್ನೆಲ್ಲಾ ಯಾರು ಮಾಡೋದು ಎಂದು ಮರುಪ್ರಶ್ನೆ ಎಸೆದು ಎಲ್ಲಾ ಕರ್ತವ್ಯ ಮುಗಿಸಿದ್ಮೇಲಷ್ಟೇ ಹೆಂಡತಿ ಪ್ರೇಮ ಸಲ್ಲಾಪಕ್ಕೆ ಬರುತ್ತಾಳೆ.
ಹೌದು, ಗಂಡು ಕೆಲಸ, ಕರ್ತವ್ಯ ಎಲ್ಲವನ್ನೂ ಬಿಟ್ಟು ‘ಸೆಕ್ಸ್’ಗೇ ಮೊದಲ ಆದ್ಯತೆ ನೀಡುತ್ತಾನೆ. ಆದರೆ ಸೆಕ್ಸ್‌ಗಾಗಿ ಕೆಲಸ ಬದಿಗಿಡಲು ಹೆಣ್ಣು ನಿರಾಕರಿಸುತ್ತಾಳೆ. ಅಂತಾರಾಷ್ಟ್ರೀಯ ಸಂಶೋಧಕರ ತಂಡವೊಂದು ಈ ಸಂಶೋಧನೆ ನಡೆಸಿದೆ. ಕರ್ತವ್ಯವನ್ನು ತ್ಯಾಗ ಮಾಡಿಯಾದರೂ ಸರಿ, ಪುರುಷ ಪ್ರೀತಿ ಮಾಡತೊಡಗುತ್ತಾನೆ.
ಆದರೆ ಮಹಿಳೆಯರು ಹಾಗಲ್ಲ, ತಮ್ಮ ವೃತ್ತಿಗೆ ಬದ್ಧವಾಗಿರುತ್ತಾರೆ. ಪ್ರೀತಿ, ಪ್ರೇಮಕ್ಕಿಂತಲೂ ಅವರಿಗೆ ಗುರಿಯೇ ಮುಖ್ಯವಾಗಿರುತ್ತದೆ ಎಂದು ಸಂಶೋಧನೆ ನಡೆಸಿದ ತಂಡದ ಮುಖ್ಯಸ್ಥ ಶೆರೋನ್ ಡಾನೋಫ್ ಬರ್ಗ್ ವಿವರಿಸುತ್ತಾರೆ. ಈ ಅಧ್ಯಯನದಿಂದ ಕಂಡುಬಂದ ಇನ್ನೊಂದು ಸಂಗತಿ, ಪುರುಷರು ಸ್ನೇಹಿತರಿಂದ ಹೆಚ್ಚಿನ ಭಾವನಾತ್ಮಕ ಬೆಂಬಲ ಗಳಿಸುತ್ತಾರೆ.

No comments: