Monday, December 24, 2007

ಅವು ಕಿರುಚದಿದ್ದರೆ ಇವು ಸ್ಖಲಿಸುವುದಿಲ್ಲ!




ಲೈಂಗಿಕ ಕ್ರಿಯೆ ನಡೆಯುವಾಗ ಜೋರಾಗಿ ಕಿರುಚಾಟ ಕೇಳಿಸುತ್ತಿದೆ ಎಂದರೆ ಏನರ್ಥ? ನಿಜ ಜೀವನದಲ್ಲಾದರೆ- ಏನೋ ಎಡವಟ್ಟಾಗಿದೆ. ಬ್ಲೂ ಫಿಲಂನಲ್ಲಾದರೆ- ನೋಡುಗರನ್ನು ಉದ್ರೇಕಗೊಳಿಸುವ ಸ್ಟಂಟ್. ಆದರೆ, ಮಂಗಗಳು ಸೆಕ್ಸ್‌ನಲ್ಲಿ ತೊಡಗಿದ್ದಾಗ ಸಿಕ್ಕಾಪಟ್ಟೆ ಕಿರುಚುತ್ತವೆ. ಕಿರುಚುವುದು ಹೆಣ್ಣು ಮಂಗ ಮಾತ್ರ ಏಕಿರಬಹದು? ಏಕೆಂದರೆ, ಅವು ಹಾಗೆ ಕರ್ರೋಪರ್ರೋ ಕಿರುಚಿದರೆ ಮಾತ್ರ ಗಂಡು ಮಂಗಕ್ಕೆ ಸ್ಖಲನವಾಗುತ್ತದೆ. ಇಲ್ಲವಾದರೆ ಅಷ್ಟೊತ್ತು ಗುದ್ದಾಡಿದ್ದು ವೇಸ್ಟ್!

ಇಂತಹ ಗಂಭೀರ ವಿಷಯವನ್ನು ಪತ್ತೆ ಹಚ್ಚಿ ಜಗತ್ತಿಗೆ ಸಾರಿದವರು ಬ್ರಿಟನ್ನಿನ ಪ್ರಾಣಿ ಶಾಸ್ತ್ರಜ್ಞರು. ಮಂಗಗಳು ಮಂಗಾಟವಾಡುವುದನ್ನೇ ಅನೇಕ ವರ್ಷಗಳ ಕಾಲ ತಾಳ್ಮೆಯಿಂದ ಕದ್ದು ನೋಡಿ, ಅವುಗಳ ಕಿರುಚಾಟ ಅರಚಾಟವನ್ನೆಲ್ಲಾ ಕೇಳಿ ಈ ಫಲಿತಾಂಶ ಪಡೆದಿದ್ದಾರೆ.

ಹೀಗೆ ಕೂಗುವುದರಿಂದ ಹೆಣ್ಣು ಮಂಗಗಳು ಗಂಡು ಮಂಗಕ್ಕೆ ಮತ್ತಷ್ಟು ಆಕರ್ಷಕವಾಗಿ ಕಾಣುತ್ತವೆಯಂತೆ. ಅಷ್ಟೇ ಅಲ್ಲ, ಆಗ ಸ್ಖಲಿಸುವ ವೀರ್ಯದ ಪ್ರಮಾಣವೂ ಹೆಚ್ಚಿರುತ್ತದೆಯಂತೆ. ಗಂಡು ಮಂಗದ ಹೊಡೆತವೂ ಹೆಚ್ಚೆಚ್ಚು ವೇಗ ಪಡೆಯುತ್ತದೆಯಂತೆ!

‘59 ಜೋಡಿ ಮಂಗಗಳು ಮೈಥುನದಲ್ಲಿ ತೊಡಗಿದ್ದನ್ನು ಅಧ್ಯಯನ ಮಾಡಿದೆವು. ಹೆಣ್ಣು ಮಂಗ ಜೋರಾಗಿ ಕಿರುಚುತ್ತಿದ್ದಾಗ ೫೯ ಗಂಡು ಮಂಗಗಳು ಯಶಸ್ವಿಯಾಗಿ ಸ್ಖಲಿಸಿದವು. ಅವು ಕಿರುಚದೇ ಇದ್ದಾಗ ಶೇ.2ರಷ್ಟು ಕಡಮೆ ಸ್ಖಲಿಸಿದವು’ ಎಂದು ಮಂಗನ ತಜ್ಞರು ಹೇಳಿದ್ದಾರೆ.

ಮಂಗಗಳಿಗೆ ವಿಜ್ಞಾನಿಗಳು ಕೊಟ್ಟ ಕಾಟ ಇಷ್ಟಕ್ಕೇ ಮುಗಿದಿಲ್ಲ. ಸೆಕ್ಸ್ ಮಾಡುವಾಗ ಗಂಡು ಮಂಗ ಎಷ್ಟು ಏಟು ಹಾಕುತ್ತದೆ ಎಂಬುದನ್ನೂ ಲೆಕ್ಕಹಾಕಿದ್ದಾರೆ. ಏಟು ಜೋರಾದಂತೆಲ್ಲ ಕಿರುಚಾಟ ಜೋರಾಗುತ್ತದೆ, ಕಿರುಚಾಟ ಜೋರಾದಂತೆ ಏಟೂ ಜೋರಾಗುತ್ತದೆ ಎಂಬ ಮಹದ್ವಿಷಯವನ್ನೂ ಅವರು ಹೊರಹಾಕಿದ್ದಾರೆ.

ಈ ವಿಜ್ಞಾನಿಗಳಿಗೆ ಮಾಡಲು ಬೇರೆ ಕೆಲಸ ಇಲ್ಲವೇ?

2 comments:

Ravishankar Bhat said...

ತಮಾಷೆಯಲ್ಲ, ಇದು ಪಂಚ್ ರಂಗಿ!!!!

shivu.k said...

ಈ ಸೈಂಟಿಷ್ಟುಗಳು ಇಂಥ ಸಂಶೋದನೆ ಹಿಂದೆ ಬಿದ್ದು ಅವರು ಮಾಡೋಲ್ಲ, ಮಾಡೋರನ್ನು ಬಿಡೋಲ್ಲ!


ಶಿವು.ಕೆ
http:/chaayakannadi.blogspot.com
www.flickr.com/photos/shivuimages