ಟೋಕಿಯೋ: ಹೆಣ್ಮಕ್ಕಳಿಗೆ ತಮ್ಮ ‘ಎದೆ’ ದೊಡ್ಡದಿದ್ದರೂ ಕಿರಿಕಿರಿ, ಸಣ್ಣದಿದ್ದರೂ ತಲೆನೋವು. ಜಪಾನ್‌ನ ಮಾಡೆಲ್ ಸೆರೆನಾ ಕೊಜಾಕುರಾಗೆ ಕೂಡಾ ತನ್ನ ದೈತ್ಯ ಸ್ತನದ ಬಗ್ಗೆ ಕೀಳರಿಮೆ ಇತ್ತು. ಆದರೆ ಇದೇ ‘ಎದೆ’ ಆಕೆಗೆ ಕೋರ್ಟಲ್ಲಿ ಕೇಸು ಗೆಲ್ಲಿಸಿಕೊಟ್ಟಿದೆ! ತಾನು ಬೇರೊಬ್ಬಳ ಜತೆ ಇದ್ದಾಗ ಈ ೩೮ರ ಹರೆಯದ ಮಾಡೆಲ್ ಮನೆ ಬಾಗಿಲಿಗೆ ತೂತು ಕೊರೆದು ಅದರ ಮೂಲಕ ಅತಿಕ್ರಮಣ ಮಾಡಿದ್ದಳು ಎಂದು ವ್ಯಕ್ತಿಯೊಬ್ಬ ಕೋರ್ಟಲ್ಲಿ ಕೇಸು ದಾಖಲಿಸಿದ್ದ. ಈಕೆ ಇಷ್ಟು ದೊಡ್ಡ ಎದೆ ಇಟ್ಕೊಂಡು ಅಷ್ಟು ಚಿಕ್ಕ ಜಾಗದಲ್ಲಿ ತೂರೋದು ಸಾಧ್ಯವೇ ಎಂದು ಸೆರೆನಾ ವಕೀಲರು ಕೋರ್ಟಲ್ಲಿ ಪ್ರಶ್ನಿಸಿದ್ದರು. ಬಾಗಿಲಿಗೆ ಕೊರೆದ ರಂಧ್ರದಷ್ಟೇ ಗಾತ್ರದ ರಿಂಗ್‌ನ್ನು ಆಕೆಯ ತಲೆಯಿಂದ ಹಾಕಿ ನ್ಯಾಯಾಧೀಶರಿಗೆ ಮನವರಿಕೆ ಮಾಡಿ ಕೊಡಲಾಯಿತು. ಈ ‘ಸತ್ಯ ದರ್ಶನ’ದಿಂದ ಸಂತುಷ್ಟರಾದ ನ್ಯಾಯಾಧೀಶರು ಸೆರೆನಾ ಪರ ತೀರ್ಪು ನೀಡಿದ್ದರು. ಇಷ್ಟೆಲ್ಲಾ ಆದ ಬಳಿಕ ಟಿವಿ ಚಾನೆಲೊಂದು ಆಕೆಯನ್ನು ಸ್ಟುಡಿಯೋಕ್ಕೆ ಕರೆಸಿ ‘ದೈತ್ಯ’ ಮಾಡೆಲ್ ಬಾಗಿಲ ತೂತಿನಲ್ಲಿ ತೂರೋದು ಅಸಾಧ್ಯ ಎಂಬ ಬಗ್ಗೆ ಪ್ರಾತ್ಯಕ್ಷಿಕೆಯನ್ನೂ ಮಾಡಿತು!
Thursday, March 13, 2008
ಜಿಪುಣ ಗಂಡನಿಗೆ ಲಕ್ಷ ಗುಲಾಬಿ ನೀಡೋ ಶಿಕ್ಷೆ!
ಟೆಹ್ರಾನ್: ಚಿನ್ನಾ ನೀನಿಲ್ದೆ ನಾ ಇರೋದು ಹೇಗೆ ಹೇಳು, ಏಳೇಳು ಜನ್ಮಕ್ಕೂ ನೀನೇ ನನ್ನವಳು ಎಂದು ಹೇಳಬೇಕಾದ ಸಮಯದಲ್ಲಿ ‘ಜಿಪುಣತನ’ ತೋರಿದ ಪತಿರಾಯ ಪಶ್ಚಾತ್ತಾಪ ಪಡ್ತಾ ಇದ್ದಾನೆ. ಜಿಪುಣತನಕ್ಕಾಗಿ ನ್ಯಾಯಾಲಯ ಪತ್ನಿಗೆ ೧ ಲಕ್ಷದ ೨೪ ಸಾವಿರ ಗುಲಾಬಿ ಹೂವುಗಳನ್ನು ನೀಡುವಂತೆ ತೀರ್ಪು ನೀಡಿದೆ. ಇದಕ್ಕೆಲ್ಲಾ ಕಾರಣವಾಗಿದ್ದು ಇರಾನ್‌ನಲ್ಲಿರುವ ಕಾನೂನು. ಪತಿರಾಯನಿಗೆ ನೀಡಿದ ವರದಕ್ಷಿಣೆಯನ್ನು ಮದುವೆಯಾದ ನಂತರ ಅಥವಾ ವಿಚ್ಛೇದನ ವೇಳೆ ಪಡೆಯಬಹುದು ಎನ್ನುತ್ತದೆ ಕಾನೂನು.
ಶಹೀನ್- ಹೆಂಗಾಮೇಹ್ ದಾಂಪತ್ಯಕ್ಕೆ ೧೦ ವರ್ಷ ಸಂದಿದೆ. ಆದರೆ ಆರಂಭದಲ್ಲೇ ಆಕೆಯೊಡನೆ ಸರಸವಾಡುವುದನ್ನು ಬಿಟ್ಟು ಆತ ತನ್ನ ಜಿಪುಣತನ ತೋರಲಾರಂಭಿಸಿದ. ಇದರಿಂದ ಉಗ್ರಸ್ವರೂಪಿಣಿಯಾದ ಆಕೆ ಕಾಫಿಯ ಹಣ ಕೊಡಲು ಹಿಂಜರಿಯುತ್ತಿದ್ದ ಪತಿ ವರದಕ್ಷಿಣೆಯನ್ನು ಗುಲಾಬಿ ರೂಪದಲ್ಲೇ ಬೇಕೆಂದು ಹಠ ಹಿಡಿದಿದ್ದಳು. ಆದರೆ ನ್ಯಾಯಾಲಯದಲ್ಲೂ ಪತಿರಾಯ ಜಿಪುಣತನ ಬಿಡಲಿಲ್ಲ. ದಿನಕ್ಕೆ ೫ ಗುಲಾಬಿ ಹೂ ನೀಡಲಷ್ಟೇ ಸಾಧ್ಯ ಎಂದಿದ್ದಾನೆ. ನ್ಯಾಯಾಲಯ ೬೪ ಸಾವಿರ ಡಾಲರ್ ಮೊತ್ತದ ಆತನ ಅಪಾರ್ಟ್‌ಮೆಂಟನ್ನು ಸ್ವಾಧೀನ ಪಡಿಸಿದೆ. ಹೆಂಗಾಮೇಹ್ ನಗುವಾ... ಗುಲಾಬಿ ಹೂವೇ... ಎಂದು ಗುಲಾಬಿಗಾಗಿ ಕಾಯುತ್ತಿದ್ದರೆ ಪತಿ ಶಾಹಿನ್‌ಗೆ ಮೈಯೆಲ್ಲಾ ಮುಳ್ಳುತಾಕುತ್ತಿರುವ ಅನುಭವ!
ಶಹೀನ್- ಹೆಂಗಾಮೇಹ್ ದಾಂಪತ್ಯಕ್ಕೆ ೧೦ ವರ್ಷ ಸಂದಿದೆ. ಆದರೆ ಆರಂಭದಲ್ಲೇ ಆಕೆಯೊಡನೆ ಸರಸವಾಡುವುದನ್ನು ಬಿಟ್ಟು ಆತ ತನ್ನ ಜಿಪುಣತನ ತೋರಲಾರಂಭಿಸಿದ. ಇದರಿಂದ ಉಗ್ರಸ್ವರೂಪಿಣಿಯಾದ ಆಕೆ ಕಾಫಿಯ ಹಣ ಕೊಡಲು ಹಿಂಜರಿಯುತ್ತಿದ್ದ ಪತಿ ವರದಕ್ಷಿಣೆಯನ್ನು ಗುಲಾಬಿ ರೂಪದಲ್ಲೇ ಬೇಕೆಂದು ಹಠ ಹಿಡಿದಿದ್ದಳು. ಆದರೆ ನ್ಯಾಯಾಲಯದಲ್ಲೂ ಪತಿರಾಯ ಜಿಪುಣತನ ಬಿಡಲಿಲ್ಲ. ದಿನಕ್ಕೆ ೫ ಗುಲಾಬಿ ಹೂ ನೀಡಲಷ್ಟೇ ಸಾಧ್ಯ ಎಂದಿದ್ದಾನೆ. ನ್ಯಾಯಾಲಯ ೬೪ ಸಾವಿರ ಡಾಲರ್ ಮೊತ್ತದ ಆತನ ಅಪಾರ್ಟ್‌ಮೆಂಟನ್ನು ಸ್ವಾಧೀನ ಪಡಿಸಿದೆ. ಹೆಂಗಾಮೇಹ್ ನಗುವಾ... ಗುಲಾಬಿ ಹೂವೇ... ಎಂದು ಗುಲಾಬಿಗಾಗಿ ಕಾಯುತ್ತಿದ್ದರೆ ಪತಿ ಶಾಹಿನ್‌ಗೆ ಮೈಯೆಲ್ಲಾ ಮುಳ್ಳುತಾಕುತ್ತಿರುವ ಅನುಭವ! ಬ್ರಿಟನ್ನಲ್ಲಿ ದಾದಿಯರ ಸರಸವಿದೇನೇ!
ಲಂಡನ್: ಅಯ್ಯೋ ಆಸ್ಪತ್ರೆ ವಾಸ ಯಾರಿಗೆ ಬೇಕು, ನನ್ನನ್ನು ಹೇಗಾದರೂ ಮಾಡಿ ಇಲ್ಲಿಂದ ಕರೆದುಕೊಂಡು ಹೋಗಿ ಎನ್ನುವ ಆಸ್ಪತ್ರೆಗೆ ದಾಖಲಾದ ರೋಗಿಗಳ ಆರ್ತನಾದ ನಾವು ಕೇಳಿರುತ್ತೇವೆ. ಆದರೆ, ಬ್ರಿಟನ್ ಕಥೇನೇ ಬೇರೆ. ಅಲ್ಲಿ ದಾದಿಯರ ಸೇವೆ ಪಡೆಯುತ್ತಿರುವ ‘ಪುರುಷ’ ರೋಗಿಗಳು ಇಂತಹ ಸೊಲ್ಲೆತ್ತುವುದಿಲ್ಲ. ಕಾರಣ, ಅವರಿಗೆ ಆಸ್ಪತ್ರೆಯಲ್ಲಿದ್ದರೆ ದಾದಿಯರ ‘ಸಾಂಗತ್ಯ’ ದೊರಕುತ್ತದೆ! ಇಲ್ಲಿನ ಪ್ರತಿ ೧೦ ದಾದಿಯರಲ್ಲಿ ಒಬ್ಬಾಕೆ ರೋಗಿಯ ಜತೆ ಸರಸ, ಸಲ್ಲಾಪಗಳಲ್ಲಿ ತೊಡಗುತ್ತಾರೆ ಎಂದು ನರ್ಸಿಂಗ್ ಟೈಮ್ಸ್ ನಿಯತಕಾಲಿಕೆ ತನ್ನ ಸಮೀಕ್ಷಾ ವರದಿಯಲ್ಲಿ ಹೇಳಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಆರರಲ್ಲಿ ಒಬ್ಬರು ದಾದಿಯರು ರೋಗಿಗಳ ಜತೆ ‘ರಹಸ್ಯ’ ಲೈಂಗಿಕ ಸಂಬಂಧವಿರಿಸಿದ್ದನ್ನು ಒಪ್ಪಿಕೊಂಡಿದ್ದಾರೆ. ಇದರಲ್ಲಿ ಕೆಲವು ಮದುವೆಯಲ್ಲಿ ಪರ್ಯವಸಾನಗೊಂಡದ್ದೂ ಇದೆ. ಇನ್ನೊಂದು ಸಂಗತಿ ಗೊತ್ತಾ ನಿಮಗೆ? ಬ್ರಿಟನ್‌ನಲ್ಲಿ ಒಟ್ಟಾರೆ ೪ ಲಕ್ಷ ದಾದಿಯರಿದ್ದಾರೆ. ಇವರಲ್ಲಿ ಹೆಚ್ಚಿನವರು ಭಾರತೀಯ ನಾರಿಯರು! ರೋಗಿಯ ಜತೆ ಸರಸ, ಸಂಬಂಧಗಳ ಬಗ್ಗೆ ತಲೆಕೆಡಿಸಿಕೊಂಡಿರುವ ಇಲ್ಲಿನ ಆರೋಗ್ಯ ರಕ್ಷಾ ನಿಯಂತ್ರಣ ಪ್ರಾಧಿಕಾರ ಹೊಸ ರೋಗಿಯ ಜತೆ ಲೈಂಗಿಕ ಸಂಬಂಧ ಇಟ್ಟುಕೊಂಡರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.
Tuesday, January 8, 2008
ಈಕೆಗೆ 10 ಜನರೊಂದಿಗೆ ‘honey’moon ಭಾಗ್ಯ!
ಗಂಡ ಮಧುಚಂದ್ರಕ್ಕೆ (honeymoon) ಕರೆದೊಯ್ದಿಲ್ಲಾ ಎಂದು ಕೆಂಡಕಾರುವ ಪತ್ನಿಯರಿಗೊಂದು ಹೊಟ್ಟೆಕಿಚ್ಚಿನ ಸುದ್ದಿ. ಕ್ಯೂಬಾದ ಮಹಿಳೆಯೊಬ್ಬಳು ಬರೋಬ್ಬರಿ 10 ಸಲ ಮಧುಚಂದ್ರ ಯಾತ್ರೆ ಮುಗಿಸುವಲ್ಲಿ ಯಶಸ್ವಿಯಾಗಿದ್ದಾಳಂತೆ.
ವಿಷಯ ಇಷ್ಟೇ ಆಗಿದ್ದರೆ ಅದರಲ್ಲಿ ಗಮ್ಮತ್ತು ಇರಲಿಲ್ಲ. ಈಕೆ 10 ಬಾರಿ ಮಧುಚಂದ್ರ ಮುಗಿಸಿದ್ದು 10 ಜನ ಗಂಡಂದಿರೊಂದಿಗೆ ಎಂಬುದೇ ಕರಾಮತ್ತಿನ ವಿಷಯ. ಇಲ್ಲಿನ ಎನೂಸಿ ಲೋಪೆಜ್ ಎಂಬ 26 ವರ್ಷದ ಯುವತಿ ತಾನಿನ್ನೂ ಕನ್ಯೆ ಎಂದು ಘೋಷಿಸಿಕೊಳ್ಳುತ್ತಲೇ ಕಳೆದ 4 ವರ್ಷದ ಅವಧಿಯಲ್ಲಿ 10 ಪುರುಷರನ್ನು ವರಿಸಿದ್ದಳಂತೆ.
ಮದುವೆಯಾಗಿದ್ದು ಸಾಲದೆಂಬಂತೆ ಪ್ರತಿಯೊಬ್ಬರೊಂದಿಗೂ ಮೋಜಿನ honeymoon ಮುಗಿಸಿದ ಭಾರಿ ಗಟ್ಟಿಗಿತ್ತಿ ಎನ್ನಿಸಿಕೊಂಡಿದ್ದಾಳೆ. ಮೊದಲು ಬೇರೆ ಬೇರೆ ದೇಶದ ವ್ಯಕ್ತಿಗಳೊಂದಿಗೆ ಮದುವೆ, ಕೊನೆಗೆ ಮಧುಚಂದ್ರ ಆಮೇಲೆ, ವೀಸಾ ಮತ್ತಿತರ ಕೆಲಸಕ್ಕೆ ಹಣ ಬೇಡುವುದು, ಕೊಡಲಿಲ್ಲವೆಂದರೆ ದೂರು ಕೊಡುವುದಾಗಿ ಬೆದರಿಕೆ ಹಾಕುವುದು ಇವಳ ಕಾಯಕವಾಗಿತ್ತಂತೆ. ಯಾರಿಗೂ ವಿಚ್ಛೇದನ ಕೊಡದೆಯೇ ಈ ‘Honey’ ಮತ್ತೊಬ್ಬರನ್ನು ವರಿಸುತ್ತಿದ್ದಳಂತೆ. ವಿಷಯ ಪೊಲೀಸರಿಗೆ ತಿಳಿದ ಮೇಲೆ ಇದೀಗ ಜೈಲಿನಲ್ಲಿ ‘Honey’ ಇಲ್ಲದೆ ರಾತ್ರಿ ಹೊತ್ತು ‘Moon’ ನೋಡ್ತಾ ಇದ್ದಾಳಂತೆ.
ಪುರುಷರಿಗೆ ಕೆಲಸಕ್ಕಿಂತಲೂ ‘ಅದೇ’ ಮುಖ್ಯ!
ಮನೆಗೆಲಸ ರಾಶಿಯಷ್ಟು ಬಾಕಿಯಿದ್ದರೂ ಗಂಡ ಹೆಂಡತಿಯನ್ನು ಸರಸಕೆ ಬಾರೇ ಎಂದು ಕರೆಯುತ್ತಾನೆ. ಆದರೆ ಈ ಕೆಲಸಗಳನ್ನೆಲ್ಲಾ ಯಾರು ಮಾಡೋದು ಎಂದು ಮರುಪ್ರಶ್ನೆ ಎಸೆದು ಎಲ್ಲಾ ಕರ್ತವ್ಯ ಮುಗಿಸಿದ್ಮೇಲಷ್ಟೇ ಹೆಂಡತಿ ಪ್ರೇಮ ಸಲ್ಲಾಪಕ್ಕೆ ಬರುತ್ತಾಳೆ.
ಹೌದು, ಗಂಡು ಕೆಲಸ, ಕರ್ತವ್ಯ ಎಲ್ಲವನ್ನೂ ಬಿಟ್ಟು ‘ಸೆಕ್ಸ್’ಗೇ ಮೊದಲ ಆದ್ಯತೆ ನೀಡುತ್ತಾನೆ. ಆದರೆ ಸೆಕ್ಸ್‌ಗಾಗಿ ಕೆಲಸ ಬದಿಗಿಡಲು ಹೆಣ್ಣು ನಿರಾಕರಿಸುತ್ತಾಳೆ. ಅಂತಾರಾಷ್ಟ್ರೀಯ ಸಂಶೋಧಕರ ತಂಡವೊಂದು ಈ ಸಂಶೋಧನೆ ನಡೆಸಿದೆ. ಕರ್ತವ್ಯವನ್ನು ತ್ಯಾಗ ಮಾಡಿಯಾದರೂ ಸರಿ, ಪುರುಷ ಪ್ರೀತಿ ಮಾಡತೊಡಗುತ್ತಾನೆ.
ಆದರೆ ಮಹಿಳೆಯರು ಹಾಗಲ್ಲ, ತಮ್ಮ ವೃತ್ತಿಗೆ ಬದ್ಧವಾಗಿರುತ್ತಾರೆ. ಪ್ರೀತಿ, ಪ್ರೇಮಕ್ಕಿಂತಲೂ ಅವರಿಗೆ ಗುರಿಯೇ ಮುಖ್ಯವಾಗಿರುತ್ತದೆ ಎಂದು ಸಂಶೋಧನೆ ನಡೆಸಿದ ತಂಡದ ಮುಖ್ಯಸ್ಥ ಶೆರೋನ್ ಡಾನೋಫ್ ಬರ್ಗ್ ವಿವರಿಸುತ್ತಾರೆ. ಈ ಅಧ್ಯಯನದಿಂದ ಕಂಡುಬಂದ ಇನ್ನೊಂದು ಸಂಗತಿ, ಪುರುಷರು ಸ್ನೇಹಿತರಿಂದ ಹೆಚ್ಚಿನ ಭಾವನಾತ್ಮಕ ಬೆಂಬಲ ಗಳಿಸುತ್ತಾರೆ.
ಖಿನ್ನ ಹೆಂಗಸರು ಪರಿಮಳ ಸೂಸುತ್ತಾರೆ!
ಮಹಿಳೆಯರು ಹೆಚ್ಚೆಚ್ಚು ಪರ್‌ಫ್ಯೂಮ್ ಹಾಕಿಕೊಳ್ಳುತ್ತಿದ್ದಾರೆ ಎಂದರೆ ಏನರ್ಥ? ಹಾಗೇ ಬಂದರೆ ವಾಸನೆ ಹೊಡೆಯಬಹುದು ಎಂದಷ್ಟೇ ಅರ್ಥವಲ್ಲ. ಅವರು ಖಿನ್ನತೆಯಿಂದ ಬಳಲುತ್ತಿದ್ದಾರೆ ಹಾಗೂ ಅಪಾಯದಲ್ಲಿದ್ದಾರೆ ಎಂದೂ ಅರ್ಥ. ಇಸ್ರೇಲಿನ ಸಂಶೋಧಕರು ಪತ್ತೆಹಚ್ಚಿದ ಗಂಭೀರ ವಿಷಯವಿದು. ಇದನ್ನು ಬ್ರಿಟನ್ನಿನ ‘ಡೇಲಿ ಟೆಲಿಗ್ರಾಫ್’ ಯಥಾವತ್ತು ವರದಿ ಮಾಡಿದೆ.
‘ನಮ್ಮ ಸಂಶೋಧನೆಯ ಪ್ರಕಾರ, ಖಿನ್ನತೆಯಿಂದ ಬಳಲುವ ಮಹಿಳೆಯರು ಪರಿಮಳ ಗ್ರಹಿಸುವ ಶಕ್ತಿ ಕಳೆದುಕೊಳ್ಳುತ್ತಾರೆ. ಹಾಗಾಗಿ, ಸಿಕ್ಕಾಪಟ್ಟೆ ಸೆಂಟ್ ಸುರುವಿಕೊಳ್ಳುತ್ತಾರೆ. ಅದೊಂದು ಕಾಯಿಲೆ; ಬರೀ ಮಾನಸಿಕ ಸಮಸ್ಯೆಯಷ್ಟೇ ಅಲ್ಲ, ದೈಹಿಕವಾಗಿಯೂ ನಷ್ಟ ಉಂಟುಮಾಡಬಲ್ಲದು’ ಎಂದು ಸಂಶೋಧಕರು ಹೇಳಿದ್ದಾರೆ. ಹಾಗಾಗಿ, ಹೆಂಡತಿ ಹತ್ತಿರ ಬಂದಾಗ ಸಕ್ಕತ್ ಪರಿಮಳ ಬರುತ್ತಿದ್ದರೆ ಗಂಡ ಇನ್ನು ಮುಂದೆ ಖುಷಿಪಡುವಂತಿಲ್ಲ, ಆಸ್ಪತ್ರೆಯ ದಾರಿ ಹುಡುಕಬೇಕು!
ಉಗಾಂಡದಲ್ಲಿ ಸೆಕ್ಸ್ ಗಿಡಕ್ಕೆ ಗಂಡಾಂತರ!
‘ತೆಂಗಿನ ಮರದ ಎಳೆಯ ಗರಿಯಲ್ಲಿರುವ ಪುಡಿ ತಿನ್ನಿ, ಲೈಂಗಿಕ ಶಕ್ತಿ ಹೆಚ್ಚಾಗುತ್ತೆ ಅಂದ್ರೆ ಯಾರೂ ಕೇಳೋದಿಲ್ಲ. ವಯಾಗ್ರಾ ಅಂತ ಸಾಯ್ತಾರೆ’ ಎಂದು ಭಾರತದ ಆಯುರ್ವೇದ ತಜ್ಞರು ಬೊಬ್ಬೆ ಹಾಕುತ್ತಾರೆ.
ಆದರೆ, ಉಗಾಂಡಾದಲ್ಲಿ ಹಾಗಲ್ಲ. ಅಲ್ಲಿ ವಯಾಗ್ರಾವನ್ನು ಕೇಳುವವರೇ ಇಲ್ಲ. ಏಕೆಂದರೆ, ಅಲ್ಲಿ ಸಿಟ್ರಾಪ್ಸಿಸ್ ಹೆಸರಿನ ಸೆಕ್ಸ್ ಗಿಡವೊಂದಿದೆ. ಅದು ಅಲ್ಲಿನ ಲೋಕಲ್ ವಯಾಗ್ರಾ. ಅದರ ಎಲೆ ತಿಂದರೆ ಸಾಕು, 3 ಗಂಟೆಯಲ್ಲಿ ಎಂತಹ ನಿಶ್ಶಕ್ತರೂ ಹಾಸಿಗೆ ವೀರರಾಗುತ್ತಾರೆ. ಇಷ್ಟೇ ಆಗಿದ್ದರೆ ಸಕ್ಕತ್ತಾಗಿದೆ ಎಂದು ಖುಷಿಪಟ್ಟು, ಆ ಗಿಡ ತರಿಸಿಕೊಳ್ಳುವ ಬಗ್ಗೆ ಯೋಚಿಸಬಹುದಿತ್ತು.
ಆದರೆ, ಉಗಾಂಡಾದ ಗಂಡಸರು ಈ ಗಿಡದ ಎಲೆ, ಕಾಂಡ, ಬೇರು ಒಂದನ್ನೂ ಬಿಡದೆ ಹರಿದು ತಿಂದು ಮಜಾ ಉಡಾಯಿಸುತ್ತಿರುವ ಕಾರಣ ಈಗ ಈ ಸೆಕ್ಸ್ ಗಿಡಕ್ಕೇ ವಯಾಗ್ರಾ ಕೊಟ್ಟು ಬೆಳೆಸುವ ಸ್ಥಿತಿ ಬಂದಿದೆ!
ಉಗಾಂಡಾದಲ್ಲಿ ಶೇ.80ರಷ್ಟು ಮಂದಿ ಎಲ್ಲ ರೋಗಕ್ಕೂ ಗಿಡಮೂಲಿಕೆಯನ್ನೇ ಬಳಸುತ್ತಾರೆ. ಅಲ್ಲೀಗ ಲೈಂಗಿಕ ರೋಗಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೆಕ್ಸ್ ಗಿಡವನ್ನು ಉಳಿಸಿದರಷ್ಟೇ ಸಾಲದು, ನೀಲಗಿರಿ ತೋಪು ಬೆಳೆಸಿದಂತೆ ಬೆಳೆಸಬೇಕಾದೀತು!
Subscribe to:
Posts (Atom)