Tuesday, December 18, 2007

ಬಂದಿದೆ ‘ಬುದ್ಧಿವಂತ’ ಬ್ರಾ


ಮುಂಜಾನೆದ್ದು ಜಾಗಿಂಗ್ ಹೋಗುವಾಗ, ಸಾರ್ವಜನಿಕ ಸ್ಥಳಗಳಲ್ಲಿ ವೇಗವಾಗಿ ಹೆಜ್ಜೆ ಹಾಕುವಾಗ ಮಹಿಳೆಯರಿಗೆ ‘ಎದೆ ಜಿಗಿತ’ದ್ದೇ ಸಮಸ್ಯೆ. ಮೈಯೆಲ್ಲಾ ಕಣ್ಣಾಗಿದ್ದಷ್ಟೂ ಸಾಕಾಗೋದಿಲ್ಲ, ಪೋಲಿ ಹುಡುಗರ ಹದ್ದಿನ ಕಣ್ಣು ಅಲ್ಲೇ ನೆಟ್ಟಿರುತ್ತದೆ. ಮಹಿಳೆಯರಿಗಿನ್ನು ಎದೆ ಜಿಗಿತದ ಸಮಸ್ಯೆಯಿಂದ ಮುಕ್ತಿ ದೊರೆಯಲಿದೆ.
ಹೇಗೆ ಅಂತೀರಾ? ‘ಎದೆಜಿಗಿತ’ವನ್ನೇ ತಡೆಯುವ ಬುದ್ಧಿವಂತ ಬ್ರಾ ಬಂದಿದೆ! ಬಂದಿದ್ದಲ್ಲ, ಆಸ್ಟ್ರೇಲಿಯಾದ ವೂಲ್ಲೊಂಗಾಂಗ್ ವಿವಿಯ ವಿಜ್ಞಾನಿಗಳು ಕಂಡು ಹಿಡಿದದ್ದು. ‘ಸೆನ್ಸರ್’ ಅಳವಡಿಸಲಾದ ವಿಶೇಷ ಬಟ್ಟೆಯಿಂದ ಈ ಕಂಚುಕ ತಯಾರಿಸಲಾಗಿದೆಯಂತೆ. ದೈಹಿಕ ಚಟುವಟಿಕೆಯ ವೇಳೆ ಸ್ತನಗಳ ಚಲನೆಯನ್ನು ಈ ಸೆನ್ಸರ್ ನಿಯಂತ್ರಿಸುತ್ತದೆ ಎಂದು ವಿಜ್ಞಾನಿಗಳು ವಿವರಿಸುತ್ತಾರೆ. ಇಬ್ಬರು ಮಹಿಳೆಯರ ಮೇಲೆ ‘ಬುದ್ಧಿವಂತ’ನ ಪ್ರಯೋಗ ಮಾಡಲಾಗಿದ್ದು ಯಶಸ್ವಿಯಾಗಿದೆ. ಈ ತಂತ್ರಜ್ಞಾನ ಉಪಯೋಗಿಸಿ ಒಳಉಡುಪು ತಯಾರಕ ಕಂಪನಿಗಳು ಆರಾಮದಾಯಕ ಕಂಚುಕ ತಯಾರಿಸಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ.

1 comment:

Ravishankar Bhat said...

ಅಬ್ಬಾ, ಎಂಥಾ ಎದೆಗಾರಿಕೆ!!!